ಗುರುವಾರ , ಡಿಸೆಂಬರ್ 12, 2019
20 °C

88 ನವೋದ್ಯಮಗಳಿಗೆ ತೆರಿಗೆ ವಿನಾಯ್ತಿ

ಪಿಟಿಐ Updated:

ಅಕ್ಷರ ಗಾತ್ರ : | |

88 ನವೋದ್ಯಮಗಳಿಗೆ ತೆರಿಗೆ ವಿನಾಯ್ತಿ

ನವದೆಹಲಿ : ಕೈಗಾರಿಕಾ ನೀತಿ ಮತ್ತು ಉತ್ತೇಜನ ಮಂಡಳಿಯು (ಡಿಐಪಿಪಿ) ಒಟ್ಟು 8,765 ನವೋದ್ಯಮಗಳನ್ನು (ಸ್ಟಾರ್ಟ್‌ಅಪ್‌) ಗುರುತಿಸಿದೆ. ಆದರೆ, ಕೇಂದ್ರ ಸರ್ಕಾರವು ಇವುಗಳ ಪೈಕಿ 88 ಸ್ಟಾರ್ಟ್‌ಅಪ್‌ಗಳಿಗೆ ಮಾತ್ರವೇ ತೆರಿಗೆ ವಿನಾಯ್ತಿ ನೀಡಿದೆ.

ಡಿಐಪಿಪಿ ಕಾರ್ಯದರ್ಶಿ ರಮೇಶ್‌ ಅಭಿಷೇಕ್‌ ಅವರು ಈ ಮಾಹಿತಿ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು 2016ರ ಜನವರಿಯಲ್ಲಿ ಆರಂಭಿಸಿದ್ದ ಸ್ಟಾರ್ಟ್‌ಅಪ್‌ ಕ್ರಿಯಾ ಯೋಜನೆಯ ಭಾಗವಾಗಿ ತೆರಿಗೆ ವಿನಾಯ್ತಿ, ಇನ್ಸ್‌ಪೆಕ್ಟರ್‌ ರಾಜ್‌ ವ್ಯವಸ್ಥೆಯಿಂದ ಮುಕ್ತಿ ಹಾಗೂ ಬಂಡವಾಳ ಗಳಿಕೆ ತೆರಿಗೆಯಿಂದಲೂ ವಿನಾಯ್ತಿ ಘೋಷಿಸಿದ್ದರು.

ಫೆಬ್ರುವರಿಯಲ್ಲಿ ರ‍್ಯಾಂಕಿಂಗ್‌ ರೂಪುರೇಷೆ ಸಿದ್ಧಪಡಿಸಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ‘ಜೂನ್‌ ತಿಂಗಳಿನಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ರ‍್ಯಾಂಕಿಂಗ್‌ ಘೋಷಣೆ ಮಾಡಲಾಗುವುದು’ ಎಂದು ತಿಳಿಸಿದ್ದಾರೆ.

ರಾಜ್ಯಗಳು ತಮ್ಮ ವ್ಯಾಪ್ತಿಯಲ್ಲಿ ಸ್ಟಾರ್ಟ್‌ಅಪ್‌ ವಾತಾವರಣ ಸೃಷ್ಟಿಗೆ ಕೈಗೊಂಡ ಕ್ರಮಗಳ ಆಧಾರದ ಮೇಲೆ ರ‍್ಯಾಂಕಿಂಗ್‌ ನಿರ್ಧಾರವಾಗಲಿದೆ ಎಂದು ಹೇಳಿದ್ದಾರೆ.

ಸ್ಟಾರ್ಟ್‌ಅಪ್‌ ನೀತಿ: 19 ರಾಜ್ಯ ಸರ್ಕಾರಗಳು ಸ್ಟಾರ್ಟ್‌ಅಪ್‌ ನೀತಿ ಜಾರಿಗೊಳಿಸಿವೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಾಹಿತಿ ನೀಡಿದೆ.

ಪ್ರತಿಕ್ರಿಯಿಸಿ (+)