ಮಂಗಳವಾರ, ಡಿಸೆಂಬರ್ 10, 2019
26 °C

ನನ್ನಮ್ಮನೇ ಸ್ಫೂರ್ತಿ

Published:
Updated:
ನನ್ನಮ್ಮನೇ ಸ್ಫೂರ್ತಿ

ಜಗತ್ತಿನ ಸಾಗರವ ದಾಟಲು ಸ್ಪೂರ್ತಿಯ ಹಡಗುಗಳು ಅನೇಕ. ಕೆಲವರಿಗೆ ಹಲವು, ಕೆಲವರಿಗೆ ಕೆಲವು. ಹಾಗೆ ಈ ಜಗತ್ಸಾಗರವ ದಾಟಲು ಸ್ಫೂರ್ತಿಯ ಹಡಗು ನನಗೆ ನನ್ನಮ್ಮ. ಸಾಮಾನ್ಯ ಭಾರತೀಯ ಮಧ್ಯಮ ಕುಟುಂಬದಲ್ಲಿ ಜನಿಸಿದ್ದವರು ನಮ್ಮಮ್ಮ. ಕುಂಟಿಪಿಲ್ಲೆ ಆಡುತ್ತಿದ್ದಾಗ ಗಂಡು ನೋಡಕ್ಕೆ ಬಂದಿದಾರೆ ಅಂತ ಕರೆದುಕೊಂಡು ಹೋಗಿ ಮದುವೆ ಎಂಬ ಜಂಜಾಟಕ್ಕೆ ನೂಕಿದರು ನಮ್ಮ ತಾತ. ಮಹಾ ಕುಡುಕನಾಗಿದ್ದ ಗಂಡನಿಂದ ದೊರೆತ ಮೂರು ಮಕ್ಕಳನ್ನ ಇವತ್ತು ಸಮಾಜದ ಜವಾಬ್ದಾರಿಯುತ ಪ್ರಜೆಗಳನ್ನಾಗಿ ಸಾಕಿ ನಿಲ್ಲಿಸಿದ್ದಾರೆ. ಒಬ್ಬಂಟಿಯಾಗಿ ದುಡಿಯುವ ಹೊಣೆ ಹೊತ್ತು, ನಮ್ಮ ಹೊಟ್ಟೆ, ಶಿಕ್ಷಣ ಹಾಗೂ ಎಲ್ಲಾ ರೀತಿಯ ಬೇಡಿಕೆಗಳನ್ನು ಈಡೇರಿಸಿ ನಮ್ಮ ಬಾಲ್ಯವನ್ನು ಸುಂದರಗೊಳಿಸಿದವರು ನಮ್ಮಮ್ಮ. ಇದಕ್ಕಾಗಿ ಅವರು ಅವಲಂಭಿಸಿದ್ದು ಗಾರ್ಮೆಂಟ್ಸ್ ವೃತ್ತಿ. ದಿನದ ಹದಿನಾರು ಗಂಟೆ ದುಡಿದು, ಮೂರು ಮಕ್ಕಳಿಗೆ ಶ್ರಮವಿಲ್ಲದ ಬಾಲ್ಯ ಕೊಟ್ಟವರು ನಮ್ಮಮ್ಮ. ನನ್ನ ರಂಗಭೂಮಿಗೆ ಹೆದರಿ ಹೆದರಿಯೇ ಬೆಂಬಲ ಕೊಟ್ಟವರು ನಮ್ಮಮ್ಮ. ನಾ ಮಾಡಿದ ಎಷ್ಟೊ ರಂಗ ಪಾತ್ರಗಳಿಗೆ ಅಮ್ಮನೇ ಪ್ರೇರಣೆ. ಅವಳ ಅಳು, ನಗು, ಕೋಪ, ಭಯ, ದುಗುಡ ನೋಡಿಕೊಂಡೆ ಬೆಳೆದ ನಾನು ಇಂದು ಒಳ್ಳೆ ನಟಿಯಾಗಿದ್ದು. ವರ್ಷ ಪ್ರತಿ ಹಬ್ಬವನ್ನೂ ಕಲರ್ ಫುಲ್ಲಾಗಿ ಆಚರಿಸಿ ಇಂದಿನ ಆ ಆಚರಣೆಗಳಿಗೆ ಅವಳೇ ಪ್ರೇರಣೆ. ವಯಸ್ಸಲ್ಲದ ವಯಸ್ಸಲ್ಲಿ ಸಾಂಸಾರಿಕ ಜವಾಬ್ದರಿ ಹೊತ್ತು ಮೂರು ಮಕ್ಕಳಲ್ಲಿ ಇಂದಿಗೂ ಅಪ್ಪನ ನೆನಪೆ ಬಾರದಂತೆ ಸಾಕಿದ ಮಹಾತಾಯಿ ನನ್ನಮ್ಮ. ಗಂಡನಿಲ್ಲದ ಹೆಣ್ಣನ್ನೂ ಮಾತಲ್ಲೆ ಬಡೆದು ಬಾಯಿಗೆ ಹಾಕಿಕೊಳ್ಳುವ ಸಮಾಜದ ಎದುರು ಧೀರೆಯಂತೆ ಬಾಳಿದ ಹೆಮ್ಮೆ ನಮ್ಮಮ್ಮ. ಎಲ್ಲಿಯೂ, ಯಾವುದಕ್ಕೂ ಯಾರಲ್ಲೂ ಕೈಯೊಡ್ಡದ ಸ್ವಾಭಿಮಾನದ ಮಹಾತಾಯಿ  ನಮ್ಮಮ್ಮ. ಇದೆಲ್ಲಾ ನನಗೆ ನನ್ನ ಬಾಳಿನುದ್ದಕ್ಕೂ ಸ್ಪೂರ್ತಿ.

ನಮ್ಮನಿಗೆ ಕತ್ತಲೆಂದರೆ ಭಯ. ನೀನ್ಯಾಯಾವಗ್ಲೂ ಬೆಳಕಲ್ಲೆ ಇರಬೇಕು ಅಂತ ನನ್ನ ಬದುಕಿಗೆ ದೀಪವಾಗಿ ನಿಂತವಳೆ ನಮ್ಮಮ್ಮ ಮಮತ ಜೆ ಶೆಟ್ಟಿ.

-ನಯನ ಸೂಡ

ಪ್ರತಿಕ್ರಿಯಿಸಿ (+)