ಭಾರತಕ್ಕೆ ಬಂದಿಳಿದ ನೇಪಾಳ ಪ್ರಧಾನಿ

7

ಭಾರತಕ್ಕೆ ಬಂದಿಳಿದ ನೇಪಾಳ ಪ್ರಧಾನಿ

Published:
Updated:
ಭಾರತಕ್ಕೆ ಬಂದಿಳಿದ ನೇಪಾಳ ಪ್ರಧಾನಿ

ನವದೆಹಲಿ : ಮೂರು ದಿನಗಳ ಭೇಟಿಗಾಗಿ ನೇಪಾಳ ಪ್ರಧಾನಿ ಕೆ.ಪಿ.ಶರ್ಮ ಒಲಿ ಅವರು ಶುಕ್ರವಾರ ಭಾರತಕ್ಕೆ ಬಂದಿದ್ದು, ನವದೆಹಲಿಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರನ್ನು ಗೃಹ ಸಚಿವ ರಾಜನಾಥ್‌ಸಿಂಗ್‌ ಅವರು ಬರಮಾಡಿಕೊಂಡರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಶನಿವಾರ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಬಳಿಕ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರನ್ನು ಭೇಟಿಯಾಗಲಿದ್ದಾರೆ.

ಮೂರು ದಿನಗಳ ಪ್ರವಾಸದಲ್ಲಿ ಉತ್ತರಾಖಂಡದ ಪಂತ್‌ನಗರದಲ್ಲಿರುವ ಜಿ.ಬಿ.ಪಂಥ್‌ ಕೃಷಿ ವಿಜ್ಞಾನ ಹಾಗೂ ತಂತ್ರಜ್ಞಾನ ಕೇಂದ್ರ, ತಳಿ ಬೀಜ ಉತ್ಪಾದನೆ ಕೇಂದ್ರಕ್ಕೂ ಒಲಿ ಅವರು ಭೇಟಿ ನೀಡಲಿದ್ದಾರೆ. ಈ ವೇಳೆ ಕೃಷಿ ವಿ.ವಿ ಒಲಿ ಅವರಿಗೆ ‘ಗೌರವ ಡಾಕ್ಟರೇಟ್‌’ ನೀಡಿ ಸನ್ಮಾನಿಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry