ಪಿಎನ್‌ಬಿ ಪ್ರಕರಣ: ಆರ್‌ಬಿಐ ಮಾಜಿ ಅಧಿಕಾರಿಯ ವಿಚಾರಣೆ

7

ಪಿಎನ್‌ಬಿ ಪ್ರಕರಣ: ಆರ್‌ಬಿಐ ಮಾಜಿ ಅಧಿಕಾರಿಯ ವಿಚಾರಣೆ

Published:
Updated:

ನವದೆಹಲಿ:  ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ, ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ವಂಚಿಸಿದ ಪ್ರಕರಣದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಡೆಪ್ಯುಟಿ ಗವರ್ನರ್ ಎಚ್‌.ಆರ್.ಖಾನ್ ಅವರನ್ನು ಸಿಬಿಐ ಶುಕ್ರವಾರ ವಿಚಾರಣೆಗೆ ಒಳಪಡಿಸಿದೆ.

ಈ ಹಿಂದಿನ ಯುಪಿಎ ಸರ್ಕಾರ ಚಿನ್ನದ ಆಮದು ನಿಯಮಗಳನ್ನು ಸಡಿಲಗೊಳಿಸಿದ್ದರ ಬಗ್ಗೆ ಖಾನ್ ಅವರನ್ನು ಪ್ರಶ್ನಿಸಲಾಗಿದೆ ಎಂದು ಸಿಬಿಐನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

2014ರ ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುವುದಕ್ಕಿಂತ ಮೂರು ದಿನ ಮೊದಲು (2014ರ ಮೇ 13) ಚಿನ್ನದ ಆಮದು ನಿಯಮಸಡಿಲಿಸುವ ಅಧಿಸೂಚನೆಗೆ ಪಿ.ಚಿದಂಬರಂ ಸಹಿ ಮಾಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry