ಸ್ಥೂಲಕಾಯ ತಡೆಗೆ ಸಕ್ಕರೆಗೆ ತೆರಿಗೆ

7

ಸ್ಥೂಲಕಾಯ ತಡೆಗೆ ಸಕ್ಕರೆಗೆ ತೆರಿಗೆ

Published:
Updated:

ಲಂಡನ್‌ : ಸ್ಥೂಲಕಾಯ ಮತ್ತು ಮಕ್ಕಳ ದಂತಕ್ಷಯವನ್ನು ನಿಯಂತ್ರಿಸುವ ಸಲುವಾಗಿ ತಂಪು ಪಾನೀಯದ ಮೇಲೆ ಸಕ್ಕರೆ ತೆರಿಗೆ ವಿಧಿಸಲು ಬ್ರಿಟನ್‌ ನಿರ್ಧರಿಸಿದೆ. ಈಗಾಗಲೇ ಫ್ರಾನ್ಸ್‌, ನಾರ್ವೆ, ಮೆಕ್ಸಿಕೊ, ಫ್ರಾನ್ಸ್‌ ದೇಶಗಳು ಸಕ್ಕರೆ ತೆರಿಗೆ ವಿಧಿಸಿವೆ.

ಜನಪ್ರಿಯ ಬ್ರ್ಯಾಂಡ್‌ಗಳಾದ ಫಾಂಟ, ರಿಬೆನಾ ಮತ್ತು ಲ್ಯೂಕೋಜೇಡ್ ಪಾನೀಯ ಕಂಪನಿ ತೆರಿಗೆ ವಿನಾಯಿತಿ ಪಡೆಯುವ ಸಲುವಾಗಿ ಸಕ್ಕರೆ ಅಂಶವನ್ನು ಕಡಿಮೆ ಮಾಡಿದೆ. ಆದರೆ ಪೆಪ್ಸಿ, ಕೋಕಾಕೋಲಾ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಿಲ್ಲ. ಇವೆರಡರಲ್ಲೂ 10 ಗ್ರಾಂನಲ್ಲಿ 100 ಮಿಲಿ ಲೀಟರ್‌ ಸಕ್ಕರೆ ಅಂಶವಿದೆ.

ಯುವಜನರು ಸಾಕಷ್ಟು ಸಕ್ಕರೆ ಪಾನೀಯಗನ್ನು  ಕುಡಿಯುತ್ತಾರೆ. ಇದು ಸ್ಥೂಲಕಾಯಕ್ಕೆ ಉತ್ತೇಜನ ನೀಡುತ್ತದೆ ಎಂದು ಸಾರ್ವಜನಿಕ ಆರೋಗ್ಯ ಸಚಿವ ಸ್ಟೀವ್ ಬ್ರೈನ್ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry