‘ನೀತಿ ಸಂಹಿತೆಗೆ ಮಣ್ಣು ಹಾಕಿ’

7

‘ನೀತಿ ಸಂಹಿತೆಗೆ ಮಣ್ಣು ಹಾಕಿ’

Published:
Updated:

ಮುಡಿಪು: ‘ನೀತಿ ಸಂಹಿತೆಗೆ ಮಣ್ಣು ಹಾಕಿ, ಅದೊಂದು ನೀತಿ ಇಲ್ಲದ ಸಮಿತಿ’ ಎಂದು ಆರ್‌ಎಸ್‌ಎಸ್‌ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು.

ಕೈರಂಗಳದ ಗೋಶಾಲೆಯಲ್ಲಿ ಗೋಕಳವು ಆರೋಪಿಗಳ ಬಂಧನ ಆಗ್ರಹಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಯುತ್ತಿದ್ದು, ಅಲ್ಲಿಗೆ ಶುಕ್ರರವಾರ ಭೇಟಿ ನೀಡಿದ ಸಂದರ್ಭದಲ್ಲಿ ಭಟ್‌ ಈ ಮಾತನ್ನಾಡಿದರು. ಅವರ ಜತೆಯಲ್ಲಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಅವರೂ ಇದ್ದರು.

‘ಕೆಟ್ಟ ರಾಜಕಾರಣ ಇರುವವರೆಗೂ ಸ್ವಾಮಿಗಳಿಗೆ ಗೌರವ ಸಿಗುವುದಿಲ್ಲ, ಹೆಣ್ಮಕ್ಕಳಿಗೆ, ಹಸುಗಳಿಗೆ ರಕ್ಷಣೆ ಇರುವುದಿಲ್ಲ. ಹಿಂದೂ ಧರ್ಮವಿರೋಧಿ ಪಕ್ಷವನ್ನು ಬೇರು ಸಮೇತ ಕಿತ್ತೊಗೆಯಬೇಕಿದೆ’ ಎಂದು ಪ್ರಭಾಕರ ಭಟ್‌ ಹೇಳಿದರು.

ಹೇಳಿಕೆಗೆ ಬದ್ಧ: ಸಚಿವ ಯು.ಟಿ. ಖಾದರ್ ದೇವಸ್ಥಾನ ಪ್ರವೇಶ ಕುರಿತಾಗಿ ತಾವು ಎರಡು ದಿನದ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ ಎಂದು ಅವರು ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry