ಶಿಕ್ಷಕರ ವರ್ಗಾವಣೆಗೆ ನೀತಿ ಸಂಹಿತೆ ಅಡ್ಡಿ?

7
ನಾನಾ ಕಾರಣಗಳಿಂದ ವಿಳಂಬ

ಶಿಕ್ಷಕರ ವರ್ಗಾವಣೆಗೆ ನೀತಿ ಸಂಹಿತೆ ಅಡ್ಡಿ?

Published:
Updated:

ಬೆಂಗಳೂರು: ನಾನಾ ಕಾರಣಗಳಿಂದ ವಿಳಂಬವಾಗುತ್ತಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ವರ್ಗಾವಣಾ ಪ್ರಕ್ರಿಯೆ ಮುಂದುವರಿಸಲು ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗುವ ಸಾಧ್ಯತೆ ಇದೆ.

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಮುಂದುವರಿಸಲು ಅನುಮತಿ ಕೋರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮಾರ್ಚ್‌ 28ರಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ಈ ಪತ್ರಕ್ಕೆ ಉತ್ತರ ನೀಡಿರುವ ಆಯೋಗದ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಡಾ.ಕೆ.ಜಿ.ಜಗದೀಶ್, ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಪರಿಶೀಲನಾ ಸಮಿತಿ ಮುಂದೆ ಈ ಪ್ರಕ್ರಿಯೆಯ ಮಾಹಿತಿ ಮಂಡಿಸಿ ಅನುಮೋದನೆ ಪಡೆಯುವಂತೆ ಶಿಕ್ಷಣ ಇಲಾಖೆಗೆ ಸೂಚಿಸಿದ್ದಾರೆ.

ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ವರ್ಗಾವಣೆಯಾಗಿರುವ ಶಿಕ್ಷಕರು ಕರ್ತವ್ಯದಿಂದ ಬಿಡುಗಡೆಯಾಗಿ, ವರ್ಗಾವಣೆಯಾದ ಜಾಗಗಳಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕಾಗಿತ್ತು.

ಕೌನ್ಸೆಲಿಂಗ್‌ ಬೇಗ ಮಾಡಿ: ‘ವರ್ಗಾವಣೆಗಾಗಿ ಶಿಕ್ಷಕರು ಈಗಾಗಲೇ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ದಿನಕ್ಕೆ 500 ಜನರಂತೆ ಶಿಕ್ಷಕರ ಕೌನ್ಸೆಲಿಂಗ್‌ ಪ್ರಕ್ರಿಯೆಯನ್ನು ಮಾಡುವುದು ಕಷ್ಟವೇನಲ್ಲ. ಚುನಾವಣೆ ಮುಗಿದ ನಂತರ ಕೌನ್ಸೆಲಿಂಗ್‌ ಪ್ರಕ್ರಿಯೆ ಮಾಡಿದರೆ ವರ್ಗಾವಣೆ ವಿಳಂಬವಾಗುತ್ತದೆ. ಈಗಲೇ ಕೌನ್ಸೆಲಿಂಗ್‌ ಮಾಡಿದರೆ ಶಿಕ್ಷಕರಿಗೆ ಅನುಕೂಲವಾಗುತ್ತದೆ’ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ್‌ ಗುರಿಕಾರ್‌ ತಿಳಿಸಿದ್ದಾರೆ.

**

ಶಿಕ್ಷಕರ ವರ್ಗಾವಣೆ ಮಾರ್ಗಸೂಚಿ ಅನ್ವಯ ಇದೇ 30ರೊಳಗೆ ಘಟಕದೊಳಗೆ, ಅಂತರ ಜಿಲ್ಲೆ, ವಿಭಾಗ ಮಟ್ಟದ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳ್ಳಬೇಕಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry