ಎಸ್‌ಜಿಎಫ್‌ಐನಿಂದ ಕ್ರಿಕೆಟ್‌ ಪ್ರತಿಭಾ ಶೋಧ

7

ಎಸ್‌ಜಿಎಫ್‌ಐನಿಂದ ಕ್ರಿಕೆಟ್‌ ಪ್ರತಿಭಾ ಶೋಧ

Published:
Updated:

ನವದೆಹಲಿ (ಪಿಟಿಐ): ಕ್ರಿಕೆಟ್ ಪ್ರತಿಭೆಗಳನ್ನು ಹುಡುಕಿ ಮುಖ್ಯಧಾರೆಗೆ ತರುವ ನಿಟ್ಟಿನಲ್ಲಿ ಸ್ಕೂಲ್‌ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್‌ಜಿಎಪ್‌ಐ) ಪ್ರತಿಭಾ ಶೋಧ ನಡೆಸಲಿದೆ. ಇದಕ್ಕಾಗಿ ನಡೆಯಲಿರುವ ಇಂಡಿಯನ್‌ ಸ್ಕೂಲ್ ಪ್ಲೇಯರ್ಸ್‌ ಲೀಗ್ ಟ್ಯಾಲೆಂಟ್‌ ಹಂಟ್ (ಐಎಸ್‌ಪಿಎಲ್‌ಟಿಎಚ್‌) ಯೋಜನೆಗೆ ಗುರುವಾರ ಇಲ್ಲಿ ಚಾಲನೆ ನೀಡಲಾಯಿತು.

12ರಿಂದ 18 ವರ್ಷದೊಳಗಿನ ಕ್ರಿಕೆಟ್‌ ಆಟಗಾರರನ್ನು ಮುಖ್ಯ ಧಾರೆಗೆ ತರುವುದಕ್ಕಾಗಿ ಎಸ್‌ಜಿಎಫ್‌ಐ ತಂಡವೊಂದನ್ನು ಸಿದ್ಧಗೊಳಿಸಿದೆ. ಶಾಲಾ ಮಟ್ಟದಲ್ಲಿ ಕ್ರಿಕೆಟ್ ಟೂರ್ನಿಗಳನ್ನು ಆಯೋಜಿಸಿ ಅವರು ಪ್ರತಿಭೆಗಳನ್ನು ಹುಡುಕಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry