ಗುರುವಾರ , ಆಗಸ್ಟ್ 13, 2020
21 °C

ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕೈಲ್‌ಗೆ ಎರಡು ಚಿನ್ನ

ಪಿಟಿಐ Updated:

ಅಕ್ಷರ ಗಾತ್ರ : | |

ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕೈಲ್‌ಗೆ ಎರಡು ಚಿನ್ನ

ಗೋಲ್ಡ್ ಕೋಸ್ಟ್‌ (ರಾಯಿಟರ್ಸ್‌): ಶಸ್ತ್ರಚಿಕಿತ್ಸೆಗೆ ಒಳಗಾಗಿ ಒಂದೇ ವರ್ಷದಲ್ಲಿ ಸ್ಪರ್ಧೆಗೆ ಇಳಿದ ಆಸ್ಟ್ರೇಲಿಯಾದ ಕೈಲ್‌ ಚಾಲ್ಮರ್ಸ್‌ ಈಜು ಸ್ಪರ್ಧೆಯಲ್ಲಿ ಎರಡು ಚಿನ್ನ ಗೆದ್ದು ಸಂಭ್ರಮಿಸಿದರು.

ಗೋಲ್ಡ್‌ ಕೋಸ್ಟ್‌ ಈಜು ಕೇಂದ್ರದಲ್ಲಿ ನಡೆದ ಸ್ಪರ್ಧೆಯಲ್ಲಿ 19 ವರ್ಷದ ಚಾಲ್ಮರ್‌ ಅಮೋಘ ಸಾಮರ್ಥ್ಯ ತೋರಿದರು. ಅವರು ಗಳಿಸಿಕೊಟ್ಟ ಚಿನ್ನದೊಂದಿಗೆ ಆತಿಥೇಯ ರಾಷ್ಟ್ರದ ಪುರುಷ ಈಜುಪಟುಗಳು ಒಂಬತ್ತರ ಪೈಕಿ ಆರು ಚಿನ್ನ ತಮ್ಮದಾಗಿಸಿಕೊಂಡರು. ಮಹಿಳಾ ವಿಭಾಗದಲ್ಲಿ ಆಸ್ಟ್ರೇಲಿಯಾ ಕ್ಲೀನ್ ಸ್ವೀಪ್ ಮಾಡಿತು.

200 ಮೀಟರ್ಸ್ ಫ್ರೀಸ್ಟೈಲ್‌ನಲ್ಲಿ ಮೊದಲ ಚಿನ್ನ ಗೆದ್ದ ಚಾಲ್ಮರ್ಸ್‌ ನಂತರ 4x400 ಮೀಟರ್ಸ್‌ ಫ್ರೀಸ್ಟೈಲ್ ರಿಲೇಯಲ್ಲೂ ಚಿನ್ನ ಗಳಿಸಿದರು.

ವ್ಯಾಯಾಮದ ಸಂದರ್ಭದಲ್ಲಿ ಹೃದಯಬಡಿತ ಹೆಚ್ಚಾದ ಕಾರಣ ಚಾಲ್ಮರ್ಸ್‌ ಅವರನ್ನು ಸುಪ್ರಾವೆಂಟ್ರಿಕ್ಯುಲರ್‌ ಟಖಿಕಾರ್ಡಿಯಾ (ಎಸ್‌ವಿಟಿ) ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. ಹೀಗಾಗಿ ಕಳೆದ ವರ್ಷದಲ್ಲಿ ಯಾವುದೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವರಿಗೆ ಸಾಧ್ಯವಾಗಿರಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.