ಬ್ಯಾಸ್ಕೆಟ್‌ಬಾಲ್‌: ಭಾರತಕ್ಕೆ ಇಂಗ್ಲೆಂಡ್‌ ಸವಾಲು

7

ಬ್ಯಾಸ್ಕೆಟ್‌ಬಾಲ್‌: ಭಾರತಕ್ಕೆ ಇಂಗ್ಲೆಂಡ್‌ ಸವಾಲು

Published:
Updated:

ಗೋಲ್ಡ್‌ ಕೋಸ್ಟ್‌: ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಸೋತಿರುವ ಭಾರತ ಪುರು ಷರ ಬ್ಯಾಸ್ಕೆಟ್‌ಬಾಲ್‌ ತಂಡ ಶನಿವಾರದ ಪಂದ್ಯದಲ್ಲಿ ಜಯಿಸಲೇಬೇಕಾದ ಅನಿವಾರ್ಯತೆಯಲ್ಲಿದೆ.

ಶನಿವಾರ ನಡೆಯುವ ‘ಬಿ’ ಗುಂಪಿನಲ್ಲಿ ತನ್ನ ಎರಡನೇ ಪಂದ್ಯದಲ್ಲಿ ಭಾರತ ತಂಡ ಬಲಿಷ್ಠ ಇಂಗ್ಲೆಂಡ್‌ ಎದುರು ಸೆಣಸಲಿದೆ.

ಕ್ಯಾಮರೂನ್‌ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತದ ಆಟಗಾರರು ಕೆಚ್ಚೆದೆಯಿಂದ ಹೋರಾಡಿದ್ದರು. ಮೊದ ಲರ್ಧದ ಆಟದಲ್ಲಿ ಮೇಲುಗೈ ಸಾಧಿಸಿದ್ದ ತಂಡ ದ್ವಿತೀಯಾರ್ಧದಲ್ಲಿ ಮಂಕಾಗಿತ್ತು. ರಕ್ಷಣಾ ವಿಭಾಗದಲ್ಲಿ ಮಾಡಿಕೊಂಡ ಯಡವಟ್ಟಿನಿಂದಾಗಿ ಸೋಲು ಎದುರಾಗಿತ್ತು.

ಮುಂಚೂಣಿ ವಿಭಾಗದ ಆಟಗಾರರಾದ ರವಿ ಭಾರ ದ್ವಾಜ್‌, ಜೀವನಾಥಮ್‌, ಯದ್ವಿಂದರ್‌ ಸಿಂಗ್‌, ಅರ ವಿಂದ್‌ ಆರ್ಮುಗಂ ಮತ್ತು ಅಮಜ್ಯೋತ್‌ ಸಿಂಗ್‌ ಅವರು ಆಂಗ್ಲರ ನಾಡಿನ ವಿರುದ್ಧ ಮಿಂಚುವ ವಿಶ್ವಾಸ ಹೊಂದಿದ್ದಾರೆ.

ಪಾಯಿಂಟ್‌ ಗಾರ್ಡ್‌ಗಳಾದ ಜೋಗಿಂದರ್‌ ಸಿಂಗ್‌ ಮತ್ತು ಅಖಿಲನ್‌ ಪಾರಿ ಅವರೂ ಪರಿಣಾಮಕಾರಿ ಆಟ ಆಡುವ ಉತ್ಸಾಹದಲ್ಲಿದ್ದಾರೆ. ಸತ್ನಾಮ್‌ ಸಿಂಗ್‌ ಭಮಾರ, ಅರ್ಷ್‌ಪ್ರೀತ್‌ ಭುಲ್ಲರ್‌, ಅಮೃತ್‌‍ಪಾಲ್‌ ಸಿಂಗ್‌ ಮತ್ತು ಅರವಿಂದ್‌ ಅಣ್ಣಾದೊರೈ ಅವರೂ ಭಾರತದ ಶಕ್ತಿಯಾಗಿದ್ದಾರೆ.

ಆ್ಯಂಡ್ರೆಸ್‌ ಕ್ಯಾಪೌಲಾಸ್‌ ಮಾರ್ಗದರ್ಶನದಲ್ಲಿ ತರಬೇತುಗೊಂಡಿರುವ ಇಂಗ್ಲೆಂಡ್‌ ತಂಡ ಎಲ್ಲಾ ವಿಭಾಗಗಳಲ್ಲೂ ಬಲಯುತವಾಗಿದೆ.

ಜಮೆಲ್‌ ಆ್ಯಂಡರ್ಸನ್, ಡೇನಿಯಲ್‌ ಎಡೋಜಿ ಮತ್ತು ಜೋಸೆಫ್‌ ಇಕಿನಮಾವಿನ್‌ ಅವರು ಭಾರತದ ರಕ್ಷಣಾ ಕೋಟೆ ಭೇದಿಸಿ ಸುಲಭವಾಗಿ ಪಾಯಿಂಟ್ಸ್‌ ಕಲೆಹಾಕುವ ಹುಮ್ಮಸ್ಸಿನಲ್ಲಿದ್ದಾರೆ.

ಮಹಿಳಾ ವಿಭಾಗದ ಪಂದ್ಯದಲ್ಲಿ ಭಾರತ ತಂಡ ಮಲೇಷ್ಯಾ ವಿರುದ್ಧ ಸೆಣಸಲಿದೆ. ಗುರುವಾರ ನಡೆದಿದ್ದ ಹಣಾಹಣಿಯಲ್ಲಿ ಭಾರತ ತಂಡ ಜಮೈಕಾ ವಿರುದ್ಧ ಸೋತಿತ್ತು.

ಬರ್ಖಾ ಸೊಂಕಾರ, ರಸ್‌ಪ್ರೀತ್‌ ಸಿಧು, ಗ್ರಿಮಾ ಮರ್ಲಿನ್‌ ವರ್ಗೀಸ್‌, ಕರ್ನಾಟಕದ ಪಿ.ಯು.ನವನೀತಾ ಮತ್ತು ಎಚ್‌.ಎಂ.ಭಾಂದವ್ಯ ಅವರು ಮಲೇಷ್ಯಾ ವಿರುದ್ಧ ಮೋಡಿ ಮಾಡಲು ಹಾತೊರೆಯುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry