7

ನನ್ನ ತಾಯಿ ನನ್ನ ಜೀವನದ ಸ್ಫೂರ್ತಿ

Published:
Updated:
ನನ್ನ ತಾಯಿ ನನ್ನ ಜೀವನದ ಸ್ಫೂರ್ತಿ

ನನ್ನ ಬದುಕಿಗೆ ಸ್ಫೂರ್ತಿ ನೀಡಿದಾಕೆ ನನ್ನ ತಾಯಿ. ತಾನು ಕಳೆದುಕೊಂಡ ವಿದ್ಯೆಯನ್ನು ತನ್ನ  ಮಕ್ಕಳಿಗಾದರೂ ನೀಡಬೇಕು ಎಂದು ತನ್ನ ಜೀವನದ ಸುಖ ಸಂತೋಷವನ್ನೆಲ್ಲ ಮುಡಿಪಾಗಿಟ್ಟು ತನ್ನ 4 ಮಕ್ಕಳಲ್ಲಿ ಇಬ್ಬರು ಇಂಜಿನಿಯರಿಂಗ್ ಪದವೀಧರರನ್ನಾಗಿ ಮಾಡಿದಳು. ಒಬ್ಬ ಮಗಳು ವಿಜ್ಞಾನ ಪದವೀಧರೆ ಮತ್ತೊಬ್ಬಳು ಸ್ನಾತಕೋತ್ತರ ಪತ್ರಿಕೋದ್ಯಮ ಪದವೀಧರರನ್ನಾಗಿ ಮಾಡಿದ ಹೆಮ್ಮೆ ನನ್ನ ತಾಯಿಯದು. ಅದಕ್ಕಾಗಿ ಇಂದಿಗೂ ಹಗಲು ಇರುಳೆನ್ನದೇ ಭೂಮಿತಾಯಿಯ ನಂಬಿ ದುಡಿಯುತ್ತಿದ್ದಾಳೆ. ಒಂದು ದಿನ ನಮ್ಮ ಪಕ್ಕದ ಮನೆಯ ಪುರುಷನೊಬ್ಬ ಕುಡಿದು ಬಂದು ಹೆಂಡಿತಿ ಮಕ್ಕಳಿಗೆ ಹೊಡಿಯುವುದನ್ನು ನೋಡಿ ಅದೇ ಬೆತ್ತ ಕಿತ್ತುಕೊಂಡು ಅವನಿಗೆ ಬಾರಿಸಿ ಬುದ್ದಿಕಲಿಸಿದ ನನ್ನ ತಾಯಿಯ ಸಾಹಸ, ದೈರ್ಯ ನನಗೆ ಅಂದಿನಿಂದಲೇ ಸ್ಫೂರ್ತಿಯಾಯಿತು.

ಮಹಿಳೆ ಸುಶಿಕ್ಷಿತಳಾದಾಗ ಮಾತ್ರ ದೌರ್ಜನ್ಯಗಳಿಂದ ಪಾರಾಗಬಹುದು ಎಂಬುದರಲ್ಲಿ ಪೂರ್ಣನಂಬಿಕೆಯನ್ನಿಟ್ಟವಳು. ನಮ್ಮ ಮನೆಯ ನೆರೆಹೊರೆಯ ಮಹಿಳೆಯರಿಗೆ ಶಿಕ್ಷಣದ ಮಹತ್ವನ್ನು ತಿಳಿಸಿಕೊಟ್ಟು ಕೈಲಾದಷ್ಟು ಆರ್ಥಿಕ ಸಹಾಯಮಾಡಿ ಶಾಲೆಬಿಟ್ಟ ಅವರ ಹೆಣ್ಣುಮಕ್ಕಳು ಮರಳಿ ಶಾಲೆಗೆ ಹೋಗುವಂತೆ ಮಾಡಿದಾಕೆ ನನ್ನ  ತಾಯಿ  ನನ್ನ ಜೀವನದ ಸ್ಫೂರ್ತಿ.

-ಚೈತ್ರಾ ಗೌಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry