ವರ್ಷದಲ್ಲಿ 100 ಕೆ.ಜಿ ಚಿನ್ನ ಜಪ್ತಿ!

7

ವರ್ಷದಲ್ಲಿ 100 ಕೆ.ಜಿ ಚಿನ್ನ ಜಪ್ತಿ!

Published:
Updated:

ಬೆಂಗಳೂರು: ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎಎಲ್) ಕಸ್ಟಮ್ಸ್ ಅಧಿಕಾರಿಗಳು ಒಂದು ವರ್ಷದಲ್ಲಿ ಜಪ್ತಿ ಮಾಡಿರುವ ಚಿನ್ನದ ಪ್ರಮಾಣ ಬರೋಬ್ಬರಿ 100ಕೆ.ಜಿ!

‘2016–17ನೇ ಸಾಲಿನಲ್ಲಿ ಸ್ಮಗ್ಲರ್‌ಗಳಿಂದ ₹ 9.97 ಕೋಟಿ ಮೌಲ್ಯದ 34 ಕೆ.ಜಿ ಚಿನ್ನ ಜಪ್ತಿ ಮಾಡಿದ್ದೆವು. ಈ ವರ್ಷ ಜಪ್ತಿ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದೆ. ಒಟ್ಟು 34 ಆರೋಪಿಗಳನ್ನು ಬಂಧಿಸಿದ್ದೇವೆ’ ಎಂದು ಕಸ್ಟಮ್ಸ್ ಅಧಿಕಾರಿಗಳು ಹೇಳಿದ್ದಾರೆ. ‘ಸ್ಮಗ್ಲರ್‌ಗಳು ಚಿನ್ನ ಸಾಗಿಸಲು ಹೊಸ ತಂತ್ರಗಳನ್ನು ಬಳಸುತ್ತಿದ್ದಾರೆ. ಚಿನ್ನದ ತಂತಿಯಿಂದ ಬಟ್ಟೆಗೆ ಎಂಬ್ರಾಯ್ಡರಿ ಮಾಡಿಕೊಂಡು ಬಂದಿದ್ದ ಮಹಿಳೆಯರನ್ನೂ ಬಂಧಿಸಿದ್ದೇವೆ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry