ಸಶಕ್ತ ಮಹಿಳೆ ನನ್ನ ಅಮ್ಮ

7

ಸಶಕ್ತ ಮಹಿಳೆ ನನ್ನ ಅಮ್ಮ

Published:
Updated:

ನಾ ಕಂಡ ಮಹಿಳೆಯರಲ್ಲಿ ನನಗೆ ನನ್ನ ಅಮ್ಮನೇ ಸ್ಪೂರ್ತಿ. ಅವಳೇ ನನ್ನ ದೇವರು. ನನ್ನ ಎಲ್ಲಾ ಕನಸು ಮತ್ತು ಸ್ಫೂರ್ತಿಗಳಿಗೆ ನೀರೆರೆದು ಪೋಷಿಸುತ್ತಾ ಬಂದವಳು ನನ್ನ ಅಮ್ಮ. ‘ಅಮ್ಮ ಎಂದರೆ ಸತ್ಯ ಅಪ್ಪ ಎಂದರೆ ನಂಬಿಕೆ’ ತಾಯಿ ತಾನು ಕಂಡ ಕನಸುಗಳನ್ನು ಮಗಳ ಮೂಲಕ ಅಥವಾ ಮಕ್ಕಳ ಮೂಲಕ ನನಸು ಮಾಡಲು ಪ್ರಯತ್ನಿಸುತ್ತಾಳೆ.

ನಮ್ಮೂರು ಒಂದು ಹಳ್ಳಿ. ಸಂಪ್ರದಾಯದ ಈ ಹಳ್ಳಿಯಲ್ಲಿ ಹುಡುಗಿಯರು ಓದದೇ ಇರುವುದೇ ಒಂದು ದೊಡ್ಡ ಸಮಸ್ಯೆ ಅಂತಹದರಲ್ಲಿ ನನ್ನನ್ನು ನನ್ನಮ್ಮ ಯಾರು ಕದಿಯಲಾಗದಂತಹ ವಿದ್ಯೆಯನ್ನು ಕೊಡಿಸಿದ್ದಾಳೆ. ಮತ್ತು ಎಂತಹ ಸಂದರ್ಭ ಬಂದರೂ ದೈರ್ಯಗೆಡದೆ ಬದುಕುವುದನ್ನು ಕಲಿಸಿಕೊಟ್ಟಿದ್ದಾಳೆ.

ನನ್ನ ತಪ್ಪುಗಳನ್ನು ತಿದ್ದುತ್ತಾ ನನಗೆ ಒಂದು ಸುಂದರವಾದ ಜೀವನ ಶೈಲಿಯನ್ನು ಕೊಡುಗೆಯಾಗಿ ನೀಡಿರುವಳು ನನ್ನ ಅಮ್ಮ. ನನ್ನ ಪ್ರತಿ ಸೋಲಿನಲ್ಲೂ ಹುರುಪು ತುಂಬುವ ಮೂಲಕ ಗೆಲ್ಲಲು ಕಾರಣವಾಗುವವಳು ಅಮ್ಮ. ಅಮ್ಮನಿಗಿಂತ ಒಳ್ಳೆಯ ಗೆಳತಿ ಯಾರು ಇಲ್ಲ. ಅದುವೇ ಹೆಣ್ಣಿನ ಮಹಿಮೆ. ನನ್ನ ಅಮ್ಮ ಹೆಣ್ಣು ಎಂಬ ಕಾರಣಕ್ಕಾಗಿ ಕೌಟುಂಬಿಕವಾಗಿ ಹಲವಾರು ಸಮಸ್ಯೆಗಳಲ್ಲಿ ನೊಂದಿಹಳು. ಸಾವಿನ ದಾರಿಗೆ ಹೋಗಿ ಮತ್ತೆ ಬದುಕಿ ಬಂದವಳು ಆ ಹೆಣ್ಣು ಇನ್ನೊಂದು  ಹೆಣ್ಣಿನ ದಾರಿ ದೀಪವಾಗಿ ಜೊತೆಯಲ್ಲಿರುವವಳು ನನ್ನ ಅಮ್ಮ.

ನನ್ನ ಬಗ್ಗೆ ಯಾರು ಏನೇ ಮಾತಾಡಿದರು ನನ್ನ ಅಮ್ಮ ಅವುಗಳಿಗೆಲ್ಲ ಕಿವಿಗೊಡದೆ ನನ್ನ ಮೇಲೆ ನಂಬಿಕೆಯಿಟ್ಟಿರುವಳು. ನಾನು ಈ ಮೆಟ್ಟಿಲು ಏರಲು ಅದುವೇ ಉನ್ನತವಾದ ಹುದ್ದೆಯಾದ ಉಪನ್ಯಾಸಕಳಾಗಿ ಕಾರ್ಯನಿರ್ವಹಿಸಲು ಅದುವೇ ಸ್ಪೂರ್ತಿ ಅಮ್ಮ. ಇದು ಕ್ಲಾರ್ಕ್‍ವೆಲ್ ಮಹಿಳಾ ಕಾರ್ಮಿಕ ದಿನವನ್ನಾಗಿ ಮಾಡುತ್ತಿದ್ದು ಇಂದು ಮಹಿಳಾ ಅಂತರರಾಷ್ಟ್ರೀಯ ದಿನವನ್ನಾಗಿರುವುದು ನನ್ನ ಸೌಭಾಗ್ಯ. ಮಾರ್ಚ್ 08...

ಈ ದಿನ ಅಂತರಾಷ್ಟ್ರೀಯ ಮಹಿಳಾ ದಿನದಂದು ಎಲ್ಲಾ ಶೇ 50ರಷ್ಟು ಮಹಿಳೆಯರು ಎಲ್ಲಾ ರಂಗಗಳ ವಲಯಗಳಲ್ಲೂ ಮಹಿಳೆ ಸಶಕ್ತರನ್ನಾಗಿಸುವುದು ಮತ್ತು ಅಧಿಕಾರ ಕೊಡಬೇಕಾಗಿರುವುದು ಬರೀ ತಂದೆ-ತಾಯಿಯರ ಪಾತ್ರವಾಗಿರದೆ ಅದು ಇಡೀ ಭಾರತೀಯರೆಲ್ಲರ  ಆದ್ಯ ಕರ್ತವ್ಯವಾಗಿದೆ ಮತ್ತು ಮನೋಸ್ಥಿತಿ ಬದಲಾಯಿಸಿಕೊಂಡು ದೌರ್ಜನ್ಯ, ದಬ್ಬಾಳಿಕೆಗಳನ್ನು ಮಾಡದೇ ಸಮನಾಗಿ ಕಾಣಬೇಕಾಗಿದೆ.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಎಲ್ಲಾ ಮಹಿಳೆಯರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು.

-ಪುಷ್ಪ.ವಿ ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry