ಹೃದಯಾಘಾತದಿಂದ ಎಎಸ್ಐ ಸಾವು

7

ಹೃದಯಾಘಾತದಿಂದ ಎಎಸ್ಐ ಸಾವು

Published:
Updated:

ಕಲ್ಬುರ್ಗಿ: ಕರ್ತವ್ಯ ನಿರತರಾಗಿದ್ದ ಎಎಸ್‌ಐ ಅಂಬಾರಾಯ ಪಾಟೀಲ್‌ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಘಟನೆ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ರಟಕಲ್‌ನಲ್ಲಿ ನಡೆದಿದೆ. 57 ವರ್ಷದ ಅಂಬಾರಾಯ ಪಾಟೀಲ್‌ ರವರಿಗೆ ರಾತ್ರಿ ಠಾಣೆಯಲ್ಲಿದ್ದಾಗ ಎದೆನೋವು ಕಾಣಸಿಕೊಂಡಿದ್ದು. ಪಕ್ಕದ ಕ್ವಾಟರ್ಸ್‌ಗೆ ತೆರಳುತ್ತಿದಂತೆಯೇ ಎದೆ ನೋವು ಉಲ್ಬಣಗೊಂಡು ಆಸ್ಪತ್ರೆಗೆ ಹೋಗುವ ಮುನ್ನವೇ ಪಾಟೀಲರು ಅಸುನೀಗಿದ್ದಾರೆ. ಮೃತ ಅಂಬಾರಾಯ ಪಾಟೀಲರು ಕಲಬುರಗಿಯ ಹಾಲ ಸುಲ್ತಾನಪುರ ಗ್ರಾಮದವರಾಗಿದ್ದು, ಪ್ರಕರಣ ರಠಕಲ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry