ಗುಪ್ತಚರ ವಿಭಾಗದಿಂದ ವರದಿ ತರಿಸಿದ ಆರೋಪ: ಮುಖ್ಯಮಂತ್ರಿ ಸಚಿವಾಲಯ ನಿರಾಕರಣೆ

ಮಂಗಳವಾರ, ಮಾರ್ಚ್ 26, 2019
31 °C

ಗುಪ್ತಚರ ವಿಭಾಗದಿಂದ ವರದಿ ತರಿಸಿದ ಆರೋಪ: ಮುಖ್ಯಮಂತ್ರಿ ಸಚಿವಾಲಯ ನಿರಾಕರಣೆ

Published:
Updated:
ಗುಪ್ತಚರ ವಿಭಾಗದಿಂದ ವರದಿ ತರಿಸಿದ ಆರೋಪ: ಮುಖ್ಯಮಂತ್ರಿ ಸಚಿವಾಲಯ ನಿರಾಕರಣೆ

ಬೆಂಗಳೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸುರಕ್ಷಿತವಲ್ಲ ಎಂದು ಗುಪ್ತಚರ ವಿಭಾಗ ನೀಡಿದೆ ಎನ್ನಲಾಗಿರುವ ವರದಿ ನಕಲಿ ಎಂದು ಮುಖ್ಯಮಂತ್ರಿಗಳ ಸಚಿವಾಲಯ ಸ್ಪಷ್ಟಪಡಿಸಿದೆ.

ಈ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಗುಪ್ತಚರ ವಿಭಾಗದ ಡಿಐಜಿಗೆ ಸೂಚಿಸಲಾಗಿದೆ ಎಂದೂ ಸಚಿವಾಲಯದ ಪ್ರಕಟಣೆ ತಿಳಿಸಿದೆ.

‘ಅಂತಹ ಯಾವುದೇ ವರದಿಯನ್ನು ಗುಪ್ತಚರ ವಿಭಾಗ ಕೊಟ್ಟಿಲ್ಲ. ಗುಪ್ತಚರ ವಿಭಾಗದಲ್ಲಿ ಈಗ ಎಡಿಜಿಪಿ ಇಲ್ಲ. ಅಲ್ಲದೆ, ಗುಪ್ತದಳದ ವರದಿ ಕನ್ನಡದಲ್ಲಿರುತ್ತದೆ' ಎಂದು ಪ್ರಕಟಣೆ ವಿವರಿಸಿದೆ.

‘ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಸಿದ್ದರಾಮಯ್ಯ ಅವರಿಗೆ ಸುರಕ್ಷಿತವಲ್ಲ. ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸಿದರೆ ಉತ್ತಮ ಎಂಬ ಬಗ್ಗೆ ರಾಜ್ಯ ಗುಪ್ತಚರ ವಿಭಾಗ ನೀಡಿದೆ ಎನ್ನಲಾದ ವರದಿಯ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಶುಕ್ರವಾರ ರಾತ್ರಿಯಿಂದ ಹರಿದಾಡುತ್ತಿದೆ.

(ರಾಜ್ಯ ಗುಪ್ತಚರ ವಿಭಾಗ ನೀಡಿದೆ ಎನ್ನಲಾದ ನಕಲಿ ವರದಿಯ ಚಿತ್ರ)

ಈ ವರದಿಯನ್ನು ಉಲ್ಲೇಖಿಸಿ ಸಿದ್ದರಾಮಯ್ಯ ‌ವಿರುದ್ಧ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅಧಿಕಾರ ದುರುಪಯೋಗದ ಆರೋಪ ಮಾಡಿದ್ದಾರೆ.

ಇನ್ನಷ್ಟು...

* ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಅಧಿಕಾರ ದುರುಪಯೋಗ: ಕುಮಾರಸ್ವಾಮಿ ಆರೋಪ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry