ಕೋನಹಳ್ಳಿಯಲ್ಲಿ ಸಿಡಿಲಿಗೆ ಎತ್ತು ಬಲಿ: ಇಬ್ಬರಿಗೆ ಗಾಯ

7

ಕೋನಹಳ್ಳಿಯಲ್ಲಿ ಸಿಡಿಲಿಗೆ ಎತ್ತು ಬಲಿ: ಇಬ್ಬರಿಗೆ ಗಾಯ

Published:
Updated:
ಕೋನಹಳ್ಳಿಯಲ್ಲಿ ಸಿಡಿಲಿಗೆ ಎತ್ತು ಬಲಿ: ಇಬ್ಬರಿಗೆ ಗಾಯ

ಯಾದಗಿರಿ: ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಇಡೀ ಬಿರುಗಾಳಿ ಸಹಿತ ಸುರಿದ ಮಳೆಗೆ ಯಾದಗಿರಿ, ಶಹಾಪುರ, ಸುರಪುರ, ಗುರುಮಠಕಲ್‌ ತಾಲ್ಲೂಕಿನ ವಿವಿಧ ಗ್ರಾಮಗಳ ಸುತ್ತಮತ್ತಲಿನ ನೂರಾರು ಎಕರೆಯಲ್ಲಿ ಭತ್ತದ ಬೆಳೆ ನೆಲಸಮವಾಗಿದ್ದು, ರೈತರು ಸಂಕಷ್ಟ ಎದುರಿಸುವಂತಾಗಿದೆ.

ಶುಕ್ರವಾರ ಸಂಜೆ ಹೊತ್ತಿನಿಂದಲೇ ಕಾರ್ಮೋಡ ಕವಿದಿತ್ತು. ರಾತ್ರಿ 7ರ ನಂತರ ನಿರಂತರವಾಗಿ ಬೀಸಿದ ಬಿರುಗಾಳಿ ಮಳೆಯಿಂದಾಗಿ ನಾಯ್ಕಲ್, ಅಬ್ಬೇತುಮಕೂರು, ಗುರಸಣಗಿ, ಹುಲ್‌ಕಲ್ (ಬಿ), ತಳಕು, ಹೆಡಗಿಮದ್ರಿ ಗ್ರಾಮಗಳ ರೈತರ ಭತ್ತದ ಬೆಳೆ ನೆಲಕಚ್ಚಿದ್ದು, ಅಂದಾಜು ₹ 10ಲಕ್ಷ ಬೆಳೆಹಾನಿ ಸಂಭವಿಸಿರಬಹುದು ಎಂದು ರೈತರಾದ ಪರಶುರಾಮ, ಅಂಜಿನಪ್ಪ ತಿಳಿಸಿದರು.

ವಡಗೇರಾ ತಾಲ್ಲೂಕಿನ ಕೋನಹಳ್ಳಿಯಲ್ಲಿ ಸಿಡಿಲಿಗೆ ಹನುಮಂತಪ್ಪ ಎಂಬುವರ ಎತ್ತು ಬಲಿಯಾಗಿದೆ. ಘಟನೆಯಲ್ಲಿ ಹನುಮಂತಪ್ಪ ಅವರ ಮಗಳು ದೇವಮ್ಮ (18) ಹಾಗೂ ತಂಗಿ ದೇವಮ್ಮ (45) ಎಂಬುವರಿಗೆ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಹಶೀಲ್ದಾರ್ ಮಲ್ಲೇಶ್ ತಂಗಾ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ಶುಕ್ರವಾರ ರಾತ್ರಿ ಜಿಲ್ಲೆಯ ಶಹಾಪುರ ತಾಲ್ಲೂಕಿನಲ್ಲಿ 8.0 ಮಿಲಿ ಮೀಟರ್, ಸುರಪುರ ತಾಲ್ಲೂಕಿನಲ್ಲಿ 17.7 ಮಿ.ಮೀ, ಯಾದಗಿರಿ ತಾಲ್ಲೂಕಿನಲ್ಲಿ 7.2 ಮಿ.ಮೀ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 32.9 ಮಿ.ಮೀ, ಮಳೆ ಬಿದ್ದಿದೆ ಎಂದು ತಹಶೀಲ್ದಾರ್ ತಂಗಾ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry