ಮಂಗಳವಾರ, ಡಿಸೆಂಬರ್ 10, 2019
24 °C

ಮೈನವಿರೇಳಿಸಿದ ಕೆಟಿಎಂ ಬೈಕ್ ಸಾಹಸ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈನವಿರೇಳಿಸಿದ ಕೆಟಿಎಂ ಬೈಕ್ ಸಾಹಸ!

ಕಲಬುರ್ಗಿ: ಬೈಕ್‌ನ ಸದ್ದು, ವೀಲಿಂಗ್ ನೋಡಿ ಹೋ ಎಂದು ಕೂಗಿದ ಯುವಕರು, ಉಸಿರು ಬಿಗಿಹಿಡಿದು ಸಾಹಸ ಪ್ರದರ್ಶನ ವೀಕ್ಷಿಸಿದ ವಿದ್ಯಾರ್ಥಿಗಳು, ಆಸಕ್ತರು.ಇವು ನಗರದ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಶುಕ್ರವಾರ ಕಂಡು ಬಂದ ದೃಶ್ಯಗಳು.

ರೇಸಿಂಗ್ ಬೈಕ್ ಬ್ರಾಂಡ್ ಕೆಟಿಎಂ ಆಯೋಜಿಸಿದ್ದ ಬೈಕ್ ಸಾಹಸ ಪ್ರದರ್ಶನವನ್ನು ವೀಕ್ಷಿಸಲು ಯುವಕರು, ಕಾಲೇಜು ವಿದ್ಯಾರ್ಥಿಗಳ ದಂಡೇ ನೆರೆದಿತ್ತು. ಚೆನ್ನೈನಿಂದ ಬಂದಿದ್ದ ವೃತ್ತಿಪರ ಬೈಕ್ ಸವಾರರು ಮೈನವಿರೇಳಿಸುವಂತೆ ಸಾಹಸವನ್ನು ಪ್ರದರ್ಶಿಸಿದರು. ಕೆಟಿಎಂ ಡ್ಯೂಕ್ ಬೈಕ್‌ನಲ್ಲಿ ಹತ್ತಾರು ಬಗೆಯ ಕಸರತ್ತು ಮಾಡಿದರು.

ಬಜಾಜ್ ಆಟೊ ಲಿಮಿಟೆಡ್‌ನ ಪ್ರೊಬೈಕಿಂಗ್ ವಿಭಾಗದ ಅಧ್ಯಕ್ಷ ಅಮಿತ್ ನಂದಿ ಮಾತನಾಡಿ, ‘ಕೆಟಿಎಂ ಬ್ರಾಂಡ್ ಅಧಿಕ ಸಾಮರ್ಥ್ಯದ ರೇಸಿಂಗ್ ಬೈಕ್‌ಗಳಿಗೆ ಹೆಸರುವಾಸಿಯಾಗಿದೆ. ಕೆಟಿಎಂ ಬೈಕ್‌ಗಳು ಸವಾರರಿಗೆ ಯಾವ ರೀತಿಯ ರೋಮಾಂಚಕ ಅನುಭವ ನೀಡಬಹುದು ಎನ್ನುವುದನ್ನು ಇಂಥ ಪ್ರದರ್ಶನದ ಮೂಲಕ ಸಾಬೀತುಪಡಿಸಲಾಗುತ್ತಿದೆ’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)