ಕಾಂಗ್ರೆಸ್‌ ಕಾರ್ಯಕರ್ತೆಯೊಂದಿಗೆ ಶಾಸಕ ಸಿದ್ದು ನ್ಯಾಮಗೌಡ ಆಪ್ತ ಮಾತು–ಕತೆ: ಆಡಿಯೊ ವೈರಲ್‌

7

ಕಾಂಗ್ರೆಸ್‌ ಕಾರ್ಯಕರ್ತೆಯೊಂದಿಗೆ ಶಾಸಕ ಸಿದ್ದು ನ್ಯಾಮಗೌಡ ಆಪ್ತ ಮಾತು–ಕತೆ: ಆಡಿಯೊ ವೈರಲ್‌

Published:
Updated:
ಕಾಂಗ್ರೆಸ್‌ ಕಾರ್ಯಕರ್ತೆಯೊಂದಿಗೆ ಶಾಸಕ ಸಿದ್ದು ನ್ಯಾಮಗೌಡ ಆಪ್ತ ಮಾತು–ಕತೆ: ಆಡಿಯೊ ವೈರಲ್‌

ಬಾಗಲಕೋಟೆ: ಜಮಖಂಡಿ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ಮಹಿಳೆಯೊಬ್ಬರೊಂದಿಗೆ ಆಪ್ತವಾಗಿ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸಂಭಾಷಣೆ ವೇಳೆ ಆ ಮಹಿಳೆ ಜಯಶ್ರೀ ಎಂದು ತಮ್ಮ ಹೆಸರು ಹೇಳಿಕೊಂಡಿದ್ದು, ಪಕ್ಷದ ಕಾರ್ಯಕರ್ತೆ ಎಂಬುದು ಗೊತ್ತಾಗುತ್ತದೆ.

ಈ ಬಗ್ಗೆ ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ಸಿದ್ದು ನ್ಯಾಮಗೌಡ ಅದೊಂದು ನಕಲಿ ಆಡಿಯೊ ಎಂದು ಹೇಳಿದರು.

ಚುನಾವಣೆ ಸಂದರ್ಭದಲ್ಲಿ ನನ್ನ ತೇಜೋವಧೆ ಮಾಡಲು, ಟಿಕೆಟ್ ತಪ್ಪಿಸಲು ವಿರೋಧಿಗಳು ಷಡ್ಯಂತ್ರ ರೂಪಿಸಿ ನಕಲಿ ಆಡಿಯೊ ಹರಿಯಬಿಟ್ಟಿದ್ದಾರೆ. ಕ್ಷೇತ್ರದಲ್ಲಿ ಈ ಭಾರಿ ಅಭಿವೃದ್ಧಿ ಹೊಳೆ ಹರಿಸಿರುವೆ. ಅದನ್ನು ಕಂಡು ಸಹಿಸದವರು ರಾಜಕೀಯವಾಗಿ ಎದುರಿಸಲಾಗದೇ ಈ ಕೆಲಸ ಮಾಡಿದ್ದಾರೆ.

ಸದ್ಯ ಜಮಖಂಡಿ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಇರುವೆ. ಅಲ್ಲಿಂದ ಬಾಗಲಕೋಟೆಗೆ ಹೊರಟಿರುವೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿ ದೂರು ದಾಖಲಿಸುವೆ. ಆಡಿಯೊದ ಸತ್ಯಾಸತ್ಯತೆ ಪರಿಶೀಲಿಸಿ ಷಡ್ಯಂತ್ರ ರೂಪಿಸಿರುವವರ ಪತ್ತೆ ಮಾಡಿ ಕ್ರಮಕ್ಕೆ ಒತ್ತಾಯಿಸುವೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry