ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಎಂಪಿಟಿ ದೇಶದ ಸ್ವಚ್ಛ ಬಂದರು

Last Updated 7 ಏಪ್ರಿಲ್ 2018, 10:25 IST
ಅಕ್ಷರ ಗಾತ್ರ

ಮಂಗಳೂರು: ದೇಶದ 12 ಪ್ರಮುಖ ಬಂದರುಗಳ ಪೈಕಿ ಇಲ್ಲಿನ ನವಮಂಗಳೂರು ಬಂದರಿಗೆ ಸ್ವಚ್ಛ ಬಂದರು ಪ್ರಶಸ್ತಿ ಲಭಿಸಿದೆ.ಕೇಂದ್ರ ಬಂದರು ಸಚಿವಾಲಯ ನೇಮಕ ಮಾಡಿದ್ದ ಭಾರತೀಯ ಗುಣಮಟ್ಟ ಮಂಡಳಿಯು  ನಡೆಸಿದ ಸಮೀಕ್ಷೆಯಲ್ಲಿ ನವಮಂಗಳೂರು ಬಂದರನ್ನು ಅತ್ಯಂತ ಸ್ವಚ್ಛ ಬಂದರು ಎಂದು ಘೋಷಿಸಲಾಗಿದೆ.ಸ್ವಚ್ಛ ಭಾರತ ಅಭಿಯಾನದಡಿ ಬಂದರು ಹಾಗೂ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಹಾಗೂ ಹಸಿರೀಕರಣಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ.

ಕಚೇರಿ, ನಿರ್ವಹಣಾ ಸ್ಥಳ, ದುರಸ್ತಿ ಷೆಡ್‌, ವಸತಿ ಪ್ರದೇಶಗಳು ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಕುರಿತು ಒಟ್ಟು 37 ಅಂಕಗಳನ್ನು ನಿಗದಿಪಡಿಸಲಾಗಿತ್ತು. ನವಮಂಗಳೂರು ಬಂದರು ಈ ಎಲ್ಲ ಮಾನದಂಡಗಳನ್ನು ಯಶಸ್ವಿಯಾಗಿ ಪೂರೈಸಿದೆ. ‘ಕಲ್ಲಿದ್ದಲು, ಕಬ್ಬಿಣದ ಅದಿರು, ತೈಲೋತ್ಪನ್ನ ಸೇರಿದಂತೆ ಅನೇಕ ಸರಕುಗಳನ್ನು ನಿರ್ವಹಣೆ ಮಾಡುತ್ತಿರುವ ನವಮಂಗಳೂರು ಬಂದರಿಗೆ ಈ ಪ್ರಶಸ್ತಿ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ’ ಎಂದು ಎನ್‌ಎಂಪಿಟಿ ಪ್ರಭಾರ ಅಧ್ಯಕ್ಷ ಸುರೇಶ್‌ ಶಿರವಾಡಕರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT