ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗೃತಿ ಅಭಿಯಾನಕ್ಕೆ ಧುಮುಕಿದ ಅಂಗವಿಕಲರು

ತುಮಕೂರು: ಬಿಜಿಎಸ್ ವೃತ್ತದಿಂದ ಸಾಗಿದ ಅಭಿಯಾನ, ತ್ರಿಚಕ್ರದಲ್ಲಿ ಕುಳಿತು ಘೋಷಣೆ ಕೂಗಿ ಜಾಗೃತಿ
Last Updated 7 ಏಪ್ರಿಲ್ 2018, 11:18 IST
ಅಕ್ಷರ ಗಾತ್ರ

ತುಮಕೂರು: ಮತದಾನದ ಬಗ್ಗೆ ಅರಿವು ಮೂಡಿಸುವ ಅಂಗವಿಕಲರ ಮತದಾನ ಜಾಗೃತಿ ಅಭಿಯಾನಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಶುಕ್ರವಾರ ಚಾಲನೆ ನೀಡಿದರು.

ನಗರದ ಬಿಜಿಎಸ್ ವೃತ್ತದಿಂದ ಆರಂಭಗೊಂಡ ಜಾಗೃತಿ ಅಭಿಯಾನದಲ್ಲಿ ಅಂಗವಿಕರಲು ತ್ರಿಚಕ್ರ ವಾಹನದಲ್ಲಿ ಕುಳಿತು ಮತದಾನ ಜಾಗೃತಿ ಕುರಿತ ಫಲಕಗಳನ್ನು ಹಿಡಿದು ಸಾಗಿದರು. ತ್ರಿಚಕ್ರ ವಾಹನದಲ್ಲಿ ಕುಳಿತು ಮತದಾನದ ಮಹತ್ವ ಕುರಿತು ಘೋಷಣೆ ಕೂಗುತ್ತಿದ್ದುದು ಗಮನ ಸೆಳೆಯಿತು. ಬಾಲಭವನದವರೆಗೂ ಈ ಅಭಿಯಾನ ನಡೆಯಿತು.

ಬಳಿಕ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕ ಪರಮೇಶ್ವರಪ್ಪ ಮಾತನಾಡಿ,‘ ಮತದಾನ ಕುರಿತು ಶಿಕ್ಷಣ ಮತ್ತು ಜಾಗೃತಿ (ಸ್ವೀಪ್ ) ಸಮಿತಿಯಿಂದ ಮತದಾನದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕ್ರಿಯಾ ಯೋಜನೆಗಳನ್ನು ರೂಪಿಸಲಾಗಿದೆ. ಮಹಿಳೆಯರು ಮತ್ತು ಅಂಗವಿಕಲರು ಮತದಾನ ಹಾಗೂ ಮತಯಂತ್ರದ ಬಗ್ಗೆ ತಿಳಿವಳಿಕೆ ಮೂಡಿಸಲು ತರಬೇತಿ ನೀಡಲಾಗುತ್ತಿದೆ' ಎಂದು ಹೇಳಿದರು.

'ನಗರ ಪ್ರದೇಶದಲ್ಲಿಯೇ ಮತದಾನದ ಪ್ರಮಾಣ ಕಡಿಮೆಯಾಗುತ್ತಿದೆ. ಮತದಾನ ಮಾಡುವುದು ಸಂವಿಧಾನಾತ್ಮಕ ಹಕ್ಕು ಎಂಬುದನ್ನು ಎಲ್ಲರೂ ಅರಿತುಕೊಂಡು ಚಲಾಯಿಸಬೇಕು' ಎಂದು ತಿಳಿಸಿದರು.

ಮುಖ್ಯ ತರಬೇತಿದಾರ ಗೋಪಾಲ್ ಮಾತನಾಡಿ, ‘ ಸಂವಿಧಾನಾತ್ಮಕವಾಗಿ ನೀಡಿರುವ ಮತದಾನದ ಹಕ್ಕು ಎಲ್ಲರಿಗೂ ಒಂದೇ ಆಗಿದ್ದು, ಅಂಗವಿಕಲರ ಮತವು ಮುಖ್ಯವಾಗಿದೆ. ಮತಗಟ್ಟೆಗೆ ತೆರಳಿ ಮತಚಲಾಯಿಸಬೇಕು. ಏಪ್ರಿಲ್ 8ರಂದು ಮಿಂಚಿನ ಮತದಾರರ ನೋಂದಣಿ ಹಮ್ಮಿಕೊಳ್ಳಲಾಗಿದೆ. ಮತದಾರರಾಗಿ ನೋಂದಣಿ ಮಾಡಿಸಬೇಕು' ಎಂದು ತಿಳಿಸಿದರು.

'ಈ ಬಾರಿ ಚುನಾವಣಾ ಆಯೋಗವು ಇವಿಎಂನೊಂದಿಗೆ ಮತಖಾತ್ರಿಯಂತ್ರ(ವಿವಿಪ್ಯಾಟ್) ಬಳಸಲು ನಿರ್ದೇಶಿಸಿದ್ದು ಇದರಿಂದಾಗಿ ಯಾರಿಗೆ ಮತ ಚಲಾಯಿಸಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದಾಗಿದೆ. ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಮತದಾನ ಮಾಡುವುದು ಅವಶ್ಯಕ' ಎಂದು ತಿಳಿಸಿದರು.

ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್, ಸ್ವೀಪ್ ನೋಡಲ್ ಅಧಿಕಾರಿ ನಾಗೇಶ್, ಮುಖ್ಯ ತರಬೇತಿದಾರ ರಿಜ್ವಾನ್ ಬಾಷಾ, ಜಿಲ್ಲಾ ಪಂಚಾಯಿತಿ ಯೋಜನಾ ಎಂಜಿನಿಯರ್ ಶ್ರೀನಿವಾಸ್ ಇದ್ದರು.

ವಿಧಾನ ಸಭಾ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರದೊಂದಿಗೆ ಪ್ರಥಮ ಬಾರಿಗೆ ವಿ.ವಿ ಪ್ಯಾಟ್ ಉಪಕರಣವನ್ನು ಬಳಕೆ ಮಾಡಲಾಗುತ್ತಿದೆ. ಈ ಕುರಿತು ಮತದಾನ ಶಿಕ್ಷಣ ಮತ್ತು ಜಾಗೃತಿ ಸಮಿತಿಯು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಾಗಾರ ಹಮ್ಮಿಕೊಂಡಿದೆ.ತುಮಕೂರು ತಾಲ್ಲೂಕಿನ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಮೂಡಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಲ್.ಮಧು(9964501325), ಶರತ್‌ಶ್ಚಂದ್ರ (9480306464), ಇಂದ್ರೇಶ್( 9844533247), ದೇವರಾಜು(9448416518), ತೀರ್ಥ(9480877466), ಚಂದ್ರಕಲಾ( 9480877476), ಪಿ.ರಾಘವೇಂದ್ರ(9480877470), ಷಂಷೀರ್(9480877457), ಉತ್ತಮ್ ( 9972204775), ಪ್ರೇಮ್‌ಕುಮಾರ್ (9480877458), ಅವರನ್ನು ಜಾಗೃತಿ ಕಾರ್ಯಾಗಾರಕ್ಕೆ ನಿಯೋಜಿಸಲಾಗಿದೆ ಎಂದು ತಾಲ್ಲೂಕು ಸ್ವಿಪ್ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT