ಶುಕ್ರವಾರ, ಡಿಸೆಂಬರ್ 6, 2019
25 °C

ಕಾಮನ್‌ವೆಲ್ತ್‌ ಕ್ರೀಡಾಕೂಟ: ಭಾರತದ ಪರ ನಾಲ್ಕನೇ ಚಿನ್ನ ಗೆದ್ದ ರಗಲ ವೆಂಕಟ್ ರಾಹುಲ್‌

Published:
Updated:
ಕಾಮನ್‌ವೆಲ್ತ್‌ ಕ್ರೀಡಾಕೂಟ: ಭಾರತದ ಪರ ನಾಲ್ಕನೇ ಚಿನ್ನ ಗೆದ್ದ ರಗಲ ವೆಂಕಟ್ ರಾಹುಲ್‌

ಗೋಲ್ಡ್‌ಕೋಸ್ಟ್‌: ಇಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತದ ರಗಲ ವೆಂಕಟ್ ರಾಹುಲ್‌ ಅವರು ವೇಟ್‌ಲಿಫ್ಟಿಂಗ್‌ನ 85 ಕೆ.ಜಿ. ಪುರುಷರ ವಿಭಾಗದಲ್ಲಿ ಚಿನ್ನದ ಪದಕ ಜಯಸಿದ್ದಾರೆ.

ರಾಹುಲ್ ಒಟ್ಟು 151 ಕೆ.ಜಿ. ಭಾರ ಎತ್ತುವ ಮೂಲಕ ಈ ಸಾಧನೆ ಮಾಡಿದರು.

ಇದರೊಂದಿಗೆ ಭಾರತ ಈವರೆಗೆ ನಾಲ್ಕು ಚಿನ್ನದ ಪದಕ ಗಳಿಸಿದಂತಾಗಿದೆ. 48 ಕೆ.ಜಿ ಮಹಿಳಾ ವೇಟ್‌ಲಿಫ್ಟಿಂಗ್‌ ವಿಭಾಗದಲ್ಲಿ ಸಾಯಿಕೋಮ್ ಮೀರಾ ಬಾಯಿ ಚಾನು ಚಿನ್ನದ ಪದಕ ಗಳಿಸಿದ್ದರೆ, ಸಂಜಿತಾ ಚಾನು ಅವರು 53 ಕೆ.ಜಿ ಮಹಿಳಾ ವೇಟ್‌ಲಿಫ್ಟಿಂಗ್‌ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ.

ಈ ಬಾರಿಯ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತದ ಪರ ಮೊದಲ ಪದಕ ಜಯಿಸಿದ ಹೆಗ್ಗಳಿಕೆ ಕನ್ನಡಿಗ, ಕುಂದಾಪುರದ ಗುರುರಾಜ್‌ ಪೂಜಾರಿ ಅವರದ್ದಾಗಿದೆ. 56 ಕೆ.ಜಿ. ಪುರುಷರ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಅವರು ಬೆಳ್ಳಿ ಪದಕ ಜಯಿಸಿದ್ದಾರೆ.

ಇನ್ನಷ್ಟು...

ಕಾಮನ್‌ವೆಲ್ತ್‌ ಕ್ರೀಡಾಕೂಟ: ಭಾರತದ ಪರ ಮೂರನೇ ಚಿನ್ನ ಗೆದ್ದ ಸತೀಶ್‌ ಕುಮಾರ್‌

ಬೆಳ್ಳಿ ಗೆದ್ದ ‘ಕುಡ್ಲ’ದ ಗುರು

ಕಾಮನ್‌ವೆಲ್ತ್ ಕ್ರೀಡಾಕೂಟ: ಭಾರತದ ಪರ ಮೊದಲ ಚಿನ್ನ ಗೆದ್ದ ಮೀರಾಬಾಯಿ ಚಾನು

ಕಾಮನ್‌ವೆಲ್ತ್ ಕ್ರೀಡಾಕೂಟ: ಭಾರತದ ಪರ ಎರಡನೇ ಚಿನ್ನ ಗೆದ್ದ ಸಂಜಿತಾ ಚಾನು

ಪ್ರತಿಕ್ರಿಯಿಸಿ (+)