ಶನಿವಾರ, ಆಗಸ್ಟ್ 8, 2020
22 °C

ಸಂಸತ್ತಿನ ಬಜೆಟ್‌ ಅಧಿವೇಶನ: ವ್ಯರ್ಥವಾಗಿದ್ದು 250 ತಾಸು!

ಪಿಟಿಐ Updated:

ಅಕ್ಷರ ಗಾತ್ರ : | |

ಸಂಸತ್ತಿನ ಬಜೆಟ್‌ ಅಧಿವೇಶನ: ವ್ಯರ್ಥವಾಗಿದ್ದು 250 ತಾಸು!

ನವದೆಹಲಿ: ಸಂಸತ್ತಿನ ಬಜೆಟ್‌ ಅಧಿವೇಶನದ ವೇಳೆ ನಿರಂತರ ಗದ್ದಲದಿಂದಾಗಿ ಈ ಅಧಿವೇಶನದಲ್ಲಿ ವ್ಯರ್ಥವಾಗಿದ್ದು 250 ತಾಸು!.

ಅಧಿವೇಶನದ ಎರಡನೇ ಭಾಗ ಮಾರ್ಚ್‌ 5ರಂದು ಆರಂಭವಾಯಿತು. ಆದರೆ ಒಂದು ದಿನವೂ ಕಲಾಪ ಸುಸೂತ್ರವಾಗಿ ನಡೆಯಲಿಲ್ಲ. ವಿವಿಧ ಪಕ್ಷಗಳು ಬೇರೆ ಬೇರೆ ಬೇಡಿಕೆ ಇಟ್ಟುಕೊಂಡು ಪ್ರತಿಭಟನೆ ನಡೆಸಿದ್ದರಿಂದಾಗಿ ಅಧಿವೇಶನವನ್ನು ಶುಕ್ರವಾರ ಅನಿರ್ದಿಷ್ಟಾವಧಿ ಕಾಲಕ್ಕೆ ಮುಂದೂಡಲಾಗಿತ್ತು.

ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ, ಬ್ಯಾಂಕ್‌ ಹಗರಣಗಳು, ಕಾವೇರಿ ನೀರು ನಿರ್ವಹಣಾ ಮಂಡಳಿಗಾಗಿ ಬೇಡಿಕೆ, ಪ್ರತಿಮೆ ಭಗ್ನ ಪ್ರಕರಣಗಳು, ಪರಿಶಿಷ್ಟ ಜಾತಿ, ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಬಗೆಗಿನ ಸುಪ್ರೀಂ ಕೋರ್ಟ್‌ ತೀರ್ಪು, ಕಾಸ್‌ಗಂಜ್‌ನಲ್ಲಿ ಕಾನೂನು ಸುವ್ಯವಸ್ಥೆ ವಿಚಾರಗಳ ಬಗ್ಗೆ ನಡೆದ ಗದ್ದಲದಿಂದಾಗಿ ಕಲಾಪ ಸುಸೂತ್ರವಾಗಿ ನಡೆಯಲಿಲ್ಲ.

ಬಜೆಟ್ ಅಧಿವೇಶನ: 10 ಪ್ರಧಾನ ಸಂಗತಿಗಳು

1. ಸಂಸತ್ ಬಜೆಟ್ ಅಧಿವೇಶನದಲ್ಲಿ ವ್ಯರ್ಥವಾಗಿದ್ದು ಸರಿಸುಮಾರು 250 ತಾಸು.

2.  ರಾಜ್ಯಸಭೆಯಲ್ಲಿ 19 ಮಹತ್ವದ ಪ್ರಶ್ನೆಗಳಲ್ಲಿ ಕೇವಲ ಐದು ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದ್ದಾರೆ.ಅದೇ ವೇಳೆ  29 ಬಾರಿ ಸಭೆ ಸೇರಿದಾಗಲೂ 580 ಪ್ರಶ್ನೆಗಳಲ್ಲಿ 17 ಪ್ರಶ್ನೆಗಳಿಗೆ ಮಾತ್ರ ಉತ್ತರಿಸಲಾಗಿದೆ.

3. ಅಧಿವೇಶನದ ಎರಡನೇ ಭಾಗ ಮಾರ್ಚ್‌ 5ರಂದು ಆರಂಭವಾಗಿದ್ದು, 22 ಬಾರಿ ಸಭೆ ನಡೆದಿದೆ, ಇದರಲ್ಲಿ ಹೆಚ್ಚಿನ ಕಲಾಪ ಗದ್ದಲದಿಂದಾಗಿ ವ್ಯರ್ಥವಾಗಿದೆ.

4. 29 ಬಾರಿ ಸಭೆ ಸೇರಿರುವುದರಲ್ಲಿ ಒಟ್ಟು 23 ಗಂಟೆ 5 ನಿಮಿಷ ಕಲಾಪ ನಡೆದಿದೆ ಎಂದು ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದ್ದಾರೆ.

5.  ಗದ್ದಲ ಹಾಗೂ ಒತ್ತಾಯದಿಂದ ಕಲಾಪವನ್ನು ಮುಂದೂಡುವಂತೆ ಮಾಡಿದ್ದರಿಂದ ಒಟ್ಟು 127 ಗಂಟೆ, 45 ನಿಮಿಷ ವ್ಯರ್ಥವಾಗಿದೆ. ಕೆಳಮನೆಯಲ್ಲಿ ಸರ್ಕಾರದ ಮಹತ್ವ ನಿರ್ಧಾರಗಳ ಚರ್ಚೆಗೆ ವ್ಯಯಿಸಿದ ಸಮಯ 9 ಗಂಟೆ  47 ನಿಮಿಷ.

6.  580 ಮಹತ್ವದ ಪ್ರಶ್ನೆಗಳಲ್ಲಿ 17 ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡಲಾಗಿದೆ. ಅಂದರೆ ಒಂದು ದಿನದಲ್ಲಿ ಸರಾಸರಿ 0.58 ಪ್ರಶ್ನೆಗಳಿಗೆ ಉತ್ತರಿಸಲಾಗಿದೆ. ಬಾಕಿ ಉಳಿದ ಮಹತ್ವದ ಪ್ರಶ್ನೆ ಮತ್ತು 6.670 ಅನ್ ಸ್ಟಾರ್ಡ್ ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡಲಾಗಿದೆ.

7. ಇಲ್ಲಿ ಅನುಮೋದನೆ ಸಿಕ್ಕಿದ ಮಸೂದೆಗಳ ಸಂಖ್ಯೆ ಐದು. ವಿತ್ತೀಯ ಮಸೂದೆ 2018 ಈ ಅಧಿವೇಶನದಲ್ಲಿ ಅನುಮೋದನೆ ಸಿಕ್ಕಿದೆ.

8. ರಾಜ್ಯಸಭೆಯಲ್ಲಿ ಒಟ್ಟು ಸಮಯದ ಮುಕ್ಕಾಲು ಭಾಗ ಗದ್ದಲದಿಂದಾಗಿಯೇ ಮುಂದೂಡಲ್ಪಟ್ಟಿದೆ.ಅಧಿವೇಶನದ ಎರಡನೇ ಭಾಗದಲ್ಲಿ ರಾಜ್ಯ ಸಭೆಯಲ್ಲಿ 30 ಬಾರಿ ಸಭೆ ಸೇರಲಾಗಿದೆ. ಮೇಲ್ಮನೆಯಲ್ಲಿ 121 ಗಂಟೆ ವ್ಯರ್ಥವಾಗಿದೆ.

9. 27 ದಿನಗಳಲ್ಲಿ ಪ್ರಶ್ನೋತ್ತರ ಅವಧಿಯೂ ಸರಿಯಾಗಿ ನಡೆದಿಲ್ಲ.

10.ಮಹತ್ವವಾದ ಮಸೂದೆಗಳಲ್ಲೊಂದಾದ ವಿತ್ತೀಯ ಮಸೂದೆ 2018ರ ಬಗ್ಗೆ ಚರ್ಚೆಗೆ ಗದ್ದಲ ಅಡ್ಡಿಯಾಗಿತ್ತು. ಆದರೆ ಮಸೂದೆ ಅಂಗೀಕಾರಗೊಂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.