ಮಂಗಳವಾರ, ಡಿಸೆಂಬರ್ 10, 2019
26 °C

ತಲೆಮಾರುಗಳ ಗೋಜಲುಗಳು

Published:
Updated:
ತಲೆಮಾರುಗಳ ಗೋಜಲುಗಳು

ಒಬ್ಬಳು ಹೆಣ್ಣುಮಗಳನ್ನು ಕೇಂದ್ರ ಪಾತ್ರದಲ್ಲಿ ಇಟ್ಟುಕೊಂಡು ಈ ಕಾದಂಬರಿ ರಚಿಸಲಾಗಿದೆ.

ದುಡಿಯುವ ಮಹಿಳೆ ಸ್ವಾವಲಂಬಿಯಾಗಿದ್ದರೂ ಯಾವುದೆಲ್ಲ ಕಟ್ಟುಪಾಡುಗಳಿಗೆ ಒಳಗಾಗಿರುತ್ತಾಳೆ, ಅವಳ ಆಸೆ, ಆಸ್ಥೆ, ಆಸಕ್ತಿಗಳನ್ನು ಸಮಕಾಲೀನ ಬದುಕಿನೊಂದಿಗೆ ತಳಕು ಹಾಕುವ ಯತ್ನವಿದು ಎಂದಷ್ಟೇ ಹೇಳಬಹುದು.

ತನ್ನ ಷಂಡತನವನ್ನು ಬಚ್ಚಿಡಲು ವ್ರತದ ಮೊರೆಹೋಗುವ ನಾಯಕ, ನಾಯಕಿಯ ಸಂಬಳಕ್ಕಾಗಿಯೇ ಮದುವೆಯಾಗುವುದು, ಅದೊಂದು ತಂತ್ರ ಎಂಬ ತೀರ್ಮಾನಕ್ಕೆ ನಾಯಕಿ ಬರುವುದು, ಬೇಡದ ಮದುವೆಯಿಂದ ಹೊರಬರುವುದು ಇದೆಲ್ಲವೂ ನಾಟಕೀಯವಾಗಿಯೇ ಜರುಗುತ್ತದೆ. ಅದಾದ ನಂತರ ಸೇವೆಯನ್ನೇ ಬದುಕೆಂದುಕೊಳ್ಳುವ ನಾಯಕಿಗೆ ಮರು ಮದುವೆ ಮಾಡಿಸಿ, ಸ್ವಾವಲಂಬಿ ಬದುಕಿಗಿಂತ ಮದುವೆಯೇ ಆದ್ಯತೆಯಾಗಲಿ ಎಂಬಂತೆ ಕಾದಂಬರಿಯನ್ನು ಪೂರ್ಣಗೊಳಿಸುತ್ತಾರೆ.

ಎರಡು ತಲೆಮಾರುಗಳ ಗೋಜಲುಗಳು ತೋರಿಕೆಯ ಬದುಕಿನ ಗೊಂದಲಗಳೆರಡೂ ಢಾಳಾಗಿ ರಾಚುತ್ತವೆ.

ಮೇವುಂಡಿ ಮಲ್ಲಾರಿ ಮಕ್ಕಳ ಕಾದಂಬರಿ ಸುಗ್ಗಿ

ಪುಸ್ತಕ ಮಾಲಿಕೆ 1ಅಂಶು, ಅನು ಮತ್ತು ರೋಬೊ

ಮತ್ತೂರು ಸುಬ್ಬಣ್ಣ

ಪ್ರಕಾಶನ: ಅಭಿನವ ಪ್ರಕಾಶನ

ಬೆಲೆ: 100 ರೂಪಾಯಿ ಪುಟ 120

ಪ್ರತಿಕ್ರಿಯಿಸಿ (+)