ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರ, 8–4–1968

Last Updated 7 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಚಿಕಾಗೋದಲ್ಲಿ ‘ದಂಗೆ’
ವಾಷಿಂಗ್ಟನ್, ಏ. 7– ದೊಂಬಿ, ಲೂಟಿ ಮತ್ತು ಗಲಭೆಗಳನ್ನು ದಮನ ಮಾಡಲು ಅಧ್ಯಕ್ಷ ಜಾನ್ಸನ್ ಅವರು ಚಿಕಾಗೋಕ್ಕೆ 5000 ಅಮೆರಿಕನ್ ಸೈನಿಕರನ್ನು ರವಾನಿಸಿದ್ದಾರೆ.

ಡಾ. ಮಾರ್ಟಿನ್ ಲೂಥರ್‌ಕಿಂಗ್ ಕೊಲೆ ಪರಿಣಾಮವಾಗಿ ಉದ್ಭವಿಸಿರುವ ಅಲ್ಲಿನ ಪರಿಸ್ಥಿತಿಯನ್ನು ಇಲಿನಾಯಿಸ್ ಲೆಫ್ಟಿನೆಂಟ್ ಗವರ್ನರ್ ಅವರು ‘ದಂಗೆ’ ಎಂದು ವರ್ಣಿಸಿದ್ದಾರೆ.

ಕೇರಳದಿಂದ ಇಸ್ರೇಲಿಗೆ ಯೆಹೂದಿಗಳ ವಲಸೆ ಅಂತ್ಯ
ನವದೆಹಲಿ, ಏ. 7– ಕೇರಳ ರಾಜ್ಯದಲ್ಲಿ ಯೆಹೂದಿ ಜನಾಂಗವೇ ಇಲ್ಲದಂತಾಗಬಹುದು ಎಂಬ ಶಂಕೆ ತಂದಿದ್ದ, ಭಾರಿ ಪ್ರಮಾಣದ ಇಸ್ರೇಲ್ ವಲಸೆ ಪ್ರವೃತ್ತಿಯು ಈಗ ನಿಂತಿದೆ.

ಸುಮಾರು 19 ಶತಮಾನಗಳ ಹಿಂದೆ ಕೇರಳಕ್ಕೆ ಬಂದು ನೆಲೆಸಿ ಜೀವನ ನಡೆಸಿಕೊಂಡು ಬಂದಿದ್ದು,  20 ವರ್ಷಗಳ ಕೆಳಕ್ಕೆ 2,000 ಸಂಖ್ಯೆಯಲ್ಲಿದ್ದ ಯೆಹೂದಿಗಳ ಪೈಕಿ ಬಹುಮಂದಿ ಇಸ್ರೇಲಿಗೆ ವಲಸೆ ಹೋಗಿದ್ದಾರೆ. ಈಗ ಅಲ್ಲಿ ಉಳಿದಿರುವುದು ಕೇವಲ 300 ಮಂದಿ ಯೆಹೂದಿಗಳು. ಅವರಲ್ಲಿ 150 ಮಂದಿ ಕೊಚ್ಚಿಯ ಯೆಹೂದಿ ನಗರದಲ್ಲಿಯೂ ಉಳಿದವರು ಹತ್ತಿರದ ತೀರಪ್ರದೇಶಗಳಾದ ಎರ್ನಾಕುಲಂ, ಚೆನ್ನಮಂಗಲಂ ಮತ್ತು ಪಾರೊರ್‌ಗಳಲ್ಲಿಯೂ ವಾಸಿಸುತ್ತಿದ್ದಾರೆ.

ಅವರೆಲ್ಲ ಸಾಕಷ್ಟು ಸ್ಥಿತಿವಂತರಾಗಿದ್ದಾರೆ. ಕೆಲವರಿಗೆ ಜಮೀನಿದ್ದರೆ ಇನ್ನೂ ಕೆಲವರು ವ್ಯಾಪಾರ ಅವಲಂಬಿಸಿದ್ದಾರೆ. ಅದನ್ನೆಲ್ಲ ಹಿಂದೆ ಬಿಟ್ಟು ಇನ್ನೊಂದು
ತಾಯ್ನಾಡಿಗೆ ಹೋಗಿ, ಜೀವನವನ್ನು ಹೊಸದಾಗಿ ಪ್ರಾರಂಭಿಸಲು ಅವರಿಗೆ ಇಷ್ಟವಿಲ್ಲ. ಆದ್ದರಿಂದ ಕೆಲವು ವರ್ಷಗಳ ಕೆಳಗೆ ಭಾರಿ ಸಂಖ್ಯೆಯಲ್ಲಿ ಆರಂಭವಾದ ಇಸ್ರೇಲ್ ವಲಸೆ ಈಗ ಅಂತ್ಯವಾಗಿದೆ ಎಂದು ದಕ್ಷಿಣ ಭಾರತ ಯೆಹೂದಿ ಸಂಘದ ಅಧ್ಯಕ್ಷ ಶ್ರೀ ಎಸ್.ಎಸ್. ಕೋಡರ್ ತಿಳಿಸಿದರು.

ಮುಮ್ಮಡಿ ಗಿಡ್ಡ
ನವದೆಹಲಿ, ಏ. 7– ಈಗ ಬಿತ್ತಿ ಬೆಳೆಯಲಾಗಿರುವ, ಇನ್ನೂ ನಾಮಕರಣ ಮಾಡದೆ ಇರುವ ‘ಮುಮ್ಮಡಿ ಗಿಡ್ಡ’ ಗೋಧಿ ತೆನೆ ಹಾಲು ತುಂಬಿ ಕೊಯ್ಲಿಗೆ ಬಂದು ಯಶಸ್ವಿಯಾದರೆ ಭಾರತದಲ್ಲಿ ಆಹಾರದ ಕೊರತೆಯೇ ಇರಲಾರದು.

ರೈತರಿಗೆ ‘ಕಾಸಿನ ಗಿಡ’ವಾಗಬಹುದಾದ ಈ ಗೋಧಿ ನಿರೀಕ್ಷಿಸಲಾದುದಕ್ಕಿಂತ ಕಡಿಮೆ ಅವಧಿಯಲ್ಲಿ ಆಹಾರ ಸ್ವಾವಲಂಬನೆ ಸಾಧಿಸಲು ಸಹಾಯಕ.

ಈಗ ಇಲ್ಲಿನ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಬೇಸಾಯ ಕ್ಷೇತ್ರದಲ್ಲಿ ಈ ಗೋಧಿಯನ್ನು ಪ್ರಯೋಗಾರ್ಥವಾಗಿ ಬೆಳೆಯಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT