ಬಿಎಸ್‌ಎನ್‌ಎಲ್ ‘ಐಪಿಎಲ್‌’ ಕೊಡುಗೆ

7

ಬಿಎಸ್‌ಎನ್‌ಎಲ್ ‘ಐಪಿಎಲ್‌’ ಕೊಡುಗೆ

Published:
Updated:

ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಸಂಸ್ಥೆಯು ಐಪಿಎಲ್‌ ಕೊಡುಗೆಯನ್ನು ಆರಂಭಿಸಿದೆ.

ಪ್ರಿಮೇಯ್ಡ್‌ ಗ್ರಾಹಕ ರಿಗಾಗಿ ಅನಿಯಮಿತ ಡೇಟಾ ‘ಎಸ್‌ಟಿವಿ–248’ ಕೊಡುಗೆ ನೀಡಿದೆ. ಇದರಲ್ಲಿ ದಿನಕ್ಕೆ 3 ಜಿಬಿ ಡೇಟಾ ಸಿಗಲಿದೆ. ಈ ಕೊಡುಗೆಯು ಐಪಿಎಲ್‌ ಪಂದ್ಯಾವಳಿ ಇರುವವರೆಗೂ 51 ದಿನಗಳವರೆಗೆ ಲಭ್ಯವಿರಲಿದೆ. ಇದರಿಂದ ಕಡಿಮೆ ಬೆಲೆಗೆ ಐಪಿಎಲ್‌ ಪಂದ್ಯಗಳನ್ನು ವೀಕ್ಷಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದೆ.

ಸೀಮಿತ ಅವಧಿಯ ಈ ಕೊಡುಗೆಯು ಶನಿವಾರದಿಂದ ತಿಂಗಳ ಅಂತ್ಯದವರೆಗೆ ಮಾತ್ರವೇ ಲಭ್ಯವಿರಲಿದೆ.

ಅನಿಯಮಿತ ಡೇಟಾ ಕೊಡುಗೆಯಲ್ಲಿ ಉಳಿದ ಸಂಸ್ಥೆಗಳಿಗೆ ಪೈಪೋಟಿ ನೀಡುತ್ತಿರುವ ರಿಲಯನ್ಸ್ ಜಿಯೊ ಸಂಸ್ಥೆಯು ಕ್ರಿಕೆಟ್ ಪ್ರಿಯರಿಗಾಗಿ ₹ 251ಕ್ಕೆ 102 ಜಿಬಿ ಡೇಟಾ ನೀಡುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry