ಸೋನಾಲಿಕಾ ಟ್ರ್ಯಾಕ್ಟರ್‌ 1 ಲಕ್ಷ ಮಾರಾಟ

7

ಸೋನಾಲಿಕಾ ಟ್ರ್ಯಾಕ್ಟರ್‌ 1 ಲಕ್ಷ ಮಾರಾಟ

Published:
Updated:

ಬೆಂಗಳೂರು: ಸೊನಾಲಿಕಾ ಇಂಟರ್‌ನ್ಯಾಷನಲ್‌ ಟ್ರಾಕ್ಟರ್‌ ಲಿ. ಕಂಪನಿಯು 2017–18ರಲ್ಲಿ 1 ಲಕ್ಷ ಟ್ರಾಕ್ಟರ್‌ಗಳನ್ನು ಮಾರಾಟ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ. ಇದರಿಂದ ಶೇ 22 ರಷ್ಟು ಮಾರಾಟ ಪ್ರಗತಿ ಸಾಧಿಸಿದೆ.

2018 ನೇ ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯು ಶೇ.56 ರಷ್ಟು ಪ್ರಗತಿಯನ್ನು ಕಂಡಿದೆ.

ಮಾರ್ಚ್ ತಿಂಗಳೊಂದರಲ್ಲಿಯೇ ಕಂಪನಿಯು ಗಣನೀಯ ಸಾಧನೆ ಮಾಡಿದ್ದು, 12,791 ಟ್ರಾಕ್ಟರ್‌ಗಳನ್ನು ಮಾರಾಟ ಮಾಡುವ ಮೂಲಕ ಶೇ.80 ರಷ್ಟು ದಾಖಲೆ ಪ್ರಮಾಣದ ಪ್ರಗತಿಯನ್ನು ಸಾಧಿಸಿದೆ’ ಎಂದು ಕಂಪನಿಯ ಕಾರ್ಯಕಾರಿ ನಿರ್ದೇಶಕ ರಾಮನ್ ಮಿತ್ತಲ್ ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry