ತಮಿಳುನಾಡು: ರೈತರಿಗಾಗಿ ಮೊಬೈಲ್‌ ಆ್ಯಪ್‌

7

ತಮಿಳುನಾಡು: ರೈತರಿಗಾಗಿ ಮೊಬೈಲ್‌ ಆ್ಯಪ್‌

Published:
Updated:

ಚೆನ್ನೈ: ರೈತರಿಗಾಗಿ ಸರ್ಕಾರ ಜಾರಿಗೆ ತಂದ ಏಳು ಯೋಜನೆಗಳ ಮಾಹಿತಿ ಪಡೆಯುವ ಉದ್ದೇಶದಿಂದ ಮುಖ್ಯಮಂತ್ರಿ ಪಳನಿಸ್ವಾಮಿ ಅವರು ಶನಿವಾರ ‘ಉಜ್ವಾನ್‌’ ಆ್ಯಪ್‌ ಬಿಡುಗಡೆ ಮಾಡಿದರು. 

ಗೂಗಲ್‌ ಪ್ಲೇಸ್ಟೋರ್‌ನಿಂದ ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ರೈತರಿಗೆ ಸಿಗುವ ಸಬ್ಸಿಡಿ, ಉಳುಮೆ ಪರಿಕರಗಳು, ಬೆಳೆ ವಿಮೆ, ಹವಾಮಾನ ಮಾಹಿತಿ, ಸ್ಥಳೀಯ ಮಳಿಗೆ ಮತ್ತು  ಬಿತ್ತನೆ ಬೀಜ ಮತ್ತು ಗೊಬ್ಬರ ದಾಸ್ತಾನು ಮಾಹಿತಿ, ತಂತ್ರಜ್ಞಾನ ಬಳಸಿ ಮುಂದಿನ ಹಂತಕ್ಕೆ ರೈತರನ್ನು ಕೊಂಡೊಯ್ಯಲು ಸರ್ಕಾರ ಕೈಗೊಂಡಿರುವ ಯೋಜನೆಗಳ ಮಾಹಿತಿಯನ್ನು ರೈತರು ಸುಲಭವಾಗಿ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry