ಮಗು ಮಾರಾಟ: ಮಹಿಳೆ ಬಂಧನ

7

ಮಗು ಮಾರಾಟ: ಮಹಿಳೆ ಬಂಧನ

Published:
Updated:

ಪಣಜಿ: ತನ್ನ 11 ತಿಂಗಳ ಗಂಡು ಮಗುವನ್ನು ₹ 2ಲಕ್ಷಕ್ಕೆ ಮಾರಾಟ ಮಾಡಿದ ಆರೋಪದ ಮೇಲೆ 32 ವರ್ಷದ ಮಹಿಳೆಯೊಬ್ಬರನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಪೆರ್ನೆಂ ನಿವಾಸಿ ಶೈಲಾ ಪಾಟೀಲ್‌ ಬಂಧಿತ ಮಹಿಳೆ. ಈಕೆಯಿಂದ ಮಗುವನ್ನು ಖರೀದಿಸಿದ್ದಾರೆ ಎನ್ನಲಾದ ಅಮರ್‌ ಮೋರ್ಜೆ ಮತ್ತು ಇದಕ್ಕೆ ಸಹಕರಿಸಿದ್ದ ಯೋಗೇಶ್‌ ಮತ್ತು ಅನಂತ್‌ ಎಂಬುವವರನ್ನೂ ಪೊಲೀಸರು ಬಂಧಿಸಿದ್ದಾರೆ.

ಶೈಲಾ ಅವರು ಹಣಕ್ಕಾಗಿ ಮಗುವನ್ನು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಆಕೆಯ ಪತಿ ಪೊಲೀಸರಿಗೆ ದೂರು ನೀಡಿದ್ದರು.

‘ತುರ್ತಾಗಿ ಹಣದ ಅವಶ್ಯಕತೆ ಇರುವುದರಿಂದ ಪತಿಗೆ ತಿಳಿಯದಂತೆ ಮಗುವನ್ನು ಮಾರಾಟ ಮಾಡಲು ಸಹಕರಿಸಬೇಕೆಂದು ಶೈಲಾ ಅವರು ಯೋಗೇಶ್‌ ಮತ್ತು ಅನಂತ್‌ ಅವರನ್ನು ಕೋರಿದ್ದರು. ಅವರು ಮಕ್ಕಳಿಲ್ಲದ ಅಮರ್‌ ಅವರನ್ನು ಸಂಪರ್ಕಿಸಿ ವ್ಯವವಹಾರ ಕುದುರಿಸಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry