ಶಾಸಕ ಜಿಗ್ನೇಶ್‌ ವಿರುದ್ಧ ಪ್ರಕರಣ ದಾಖಲು

7

ಶಾಸಕ ಜಿಗ್ನೇಶ್‌ ವಿರುದ್ಧ ಪ್ರಕರಣ ದಾಖಲು

Published:
Updated:

ಕೊಪ್ಪಳ: ಗುಜರಾತ್‌ನ ವಡಗಾಂ ಶಾಸಕ ಜಿಗ್ನೇಶ್‌ ಮೇವಾನಿ ಹಾಗೂ ಸಂಘಟಕ ಹುಸೇನಪ್ಪ ಹಂಚಿನಾಳ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಶನಿವಾರ ಪ್ರಕರಣ ದಾಖಲಾಗಿದೆ.

ಗಂಗಾವತಿಯಲ್ಲಿ ಏಪ್ರಿಲ್‌ 6 ರಂದು ‘ಸಂವಿಧಾನ ಉಳಿಸಿ ಕರ್ನಾಟಕ ಸಂಘಟನೆ’ಯು ಆಯೋಜಿಸಿದ್ದ ಸಭೆಯಲ್ಲಿ ಜಿಗ್ನೇಶ್‌ ಮಾತನಾಡಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕದಂತೆ ಕರೆ ನೀಡಿದ್ದರು. ನಂತರ ಸಭೆಯಲ್ಲಿ ಭಾಗವಹಿಸಿದ್ದವರಿಗೆ ಸಂಘಟಕರು ಹಣ ವಿತರಣೆ ಮಾಡಿದ್ದಾರೆ ಎಂದು ಆರೋಪಿಸಿ ಕ್ಷಿಪ್ರ ಪಡೆಯ ಅಧಿಕಾರಿ ದೂರು ನೀಡಿದ್ದು, ಗಂಗಾವತಿ ನಗರ ಠಾಣೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry