ಗುರುವಾರ , ಡಿಸೆಂಬರ್ 12, 2019
20 °C

ನಿರಂಜನ್ ಥಾಮಸ್ ಆಳ್ವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿರಂಜನ್ ಥಾಮಸ್ ಆಳ್ವ

ಬೆಂಗಳೂರು: ಕಾಂಗ್ರೆಸ್ಸಿನ ಹಿರಿಯ ನಾಯಕಿ, ಮಾಜಿ ರಾಜ್ಯಪಾಲೆ ಮಾರ್ಗರೆಟ್ ಆಳ್ವ ಪತಿ ನಿರಂಜನ್ ಥಾಮಸ್ ಆಳ್ವ (78) ಶನಿವಾರ ನಿಧನರಾದರು.

ಅವರಿಗೆ ಪತ್ನಿ ಮಾರ್ಗರೆಟ್‌, ಪುತ್ರಿ ಹಾಗೂ ಮೂವರು ಗಂಡು ಮಕ್ಕಳಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರೂ, ಮೊದಲ ಸಂಸದ ದಂಪತಿ ಎನಿಸಿಕೊಂಡಿದ್ದ ಜೋಕಿಮ್ ಆಳ್ವ– ವಯೋಲೆಟ್ ಆಳ್ವ ಅವರ ಪುತ್ರ.

ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ಅವರು ಇಲ್ಲಿನ ಎಂ.ಎಸ್‌. ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದರು. 20 ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಚೆನ್ನೈನ ಲೊಯಲಾ ಕಾಲೇಜು ಮತ್ತು ಬನಾರಸ್‌ ಹಿಂದೂ ಯೂನಿವರ್ಸಿಟಿಯಲ್ಲಿ ಶಿಕ್ಷಣ ಪಡೆದಿದ್ದ ನಿರಂಜನ್‌, ವಿದ್ಯಾರ್ಥಿ ನಾಯಕರಾಗಿ ಗುರುತಿಸಿಕೊಂಡಿದ್ದರು. ಭಾರತೀಯ ಸ್ಟೇಟ್‌ ಬ್ಯಾಂಕಿನ ಮಾಜಿ ನಿರ್ದೇಶಕರೂ ಆಗಿದ್ದ ಅವರು, 50ರ ದಶಕದಲ್ಲಿ ಆಲ್‌ ಇಂಡಿಯಾ ಕ್ಯಾಥೋಲಿಕ್‌ ಯೂನಿವರ್ಸಿಟಿ ಫೆಡರೇಷನ್‌ನ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ, ಆ ಸಂಘಟನೆಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಸುಪ್ರೀಂ ಕೋರ್ಟ್ ವಕೀಲರೂ ಆಗಿದ್ದ ನಿರಂಜನ್, ಮಹಿಳಾ ಗಗನಸಖಿಯರಿಗೂ ಪುರುಷರ ಸರಿಸಮಾನ ಸೌಲಭ್ಯ ಒದಗಿಸುವಲ್ಲಿ ಯಶಸ್ವಿಯಾಗಿದ್ದರು.

ಸೇಂಟ್ ತೆರೆಸಾ ಕೋಲ್ಕತ ಚರ್ಚ್‌ನಲ್ಲಿ ಭಾನುವಾರ ಸಂಜೆ 4 ಗಂಟೆಗೆ ಅಂತಿಮ ವಿಧಿವಿಧಾನಗಳ ಬಳಿಕ ಹೆಬ್ಬಾಳ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಪ್ರತಿಕ್ರಿಯಿಸಿ (+)