ಹಾಕಿ ಲೀಗ್‌: ಎಜಿಒಆರ್‌ಸಿಗೆ ಜಯ

7

ಹಾಕಿ ಲೀಗ್‌: ಎಜಿಒಆರ್‌ಸಿಗೆ ಜಯ

Published:
Updated:

ಬೆಂಗಳೂರು: ಎಜಿಒಆರ್‌ಸಿ ತಂಡ ನಾಲ್ಕನೇ ಆವೃತ್ತಿಯ ಕರ್ನಾಟಕ ಲೀಗ್‌ ಪಂದ್ಯದಲ್ಲಿ ಗೆದ್ದಿದೆ.

ಶನಿವಾರ ನಡೆದ ಪಂದ್ಯದಲ್ಲಿ ಎಜಿಒಆರ್‌ಸಿ ತಂಡವು 5–4 ಗೋಲುಗಳಿಂದ ಕೆನರಾ ಬ್ಯಾಂಕ್‌ ತಂಡವನ್ನು ಮಣಿಸಿತು.

ರೋಚಕ ಹಣಾಹಣಿಯಿಂದ ಕೂಡಿದ್ದ ಪಂದ್ಯದಲ್ಲಿ ವಿಜಯಿ ತಂಡದ ಪರವಾಗಿ ದರ್ಶನ್‌ ಡಿ.ಎಸ್‌, ಮೊಹಮ್ಮದ್‌ ನಯೀಮ್‌ ತಲಾ ಒಂದು ಹಾಗೂ ಶಂಕರ್‌ ಪಾಟೀಲ್‌ ಅವರು ಎರಡು ಗೋಲು ದಾಖಲಿಸಿದರು. 61ನೇ ನಿಮಿಷದಲ್ಲಿ ಚೆಂಡನ್ನು ಗುರಿ ತಲುಪಿಸಿದ ಸಚಿನ್‌ ಮಲ್ಲಾಡ್‌ ಅವರು ಗೆಲುವಿನ ರೂವಾರಿಯಾದರು.

ಕೆನರಾ ಬ್ಯಾಂಕ್‌ ತಂಡದ ಪೃಥ್ವಿರಾಜ್‌ ಎರಡು ಹಾಗೂ ಕೆ. ಪಿ. ದಿನೇಶ್‌ ಮತ್ತು ಪ್ರಧಾನ್‌ ಸೋಮಣ್ಣ ಅವರು ತಲಾ ಒಂದು ಗೋಲು ಗಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry