ಸೋಮವಾರ, ಡಿಸೆಂಬರ್ 9, 2019
21 °C

ಮಗುವಿಗೆ ಮಿರ್ಜಾ ಎಂದು ನಾಮಕರಣ: ಸಾನಿಯಾ

Published:
Updated:
ಮಗುವಿಗೆ ಮಿರ್ಜಾ ಎಂದು ನಾಮಕರಣ: ಸಾನಿಯಾ

ಪಣಜಿ: ಭವಿಷ್ಯದಲ್ಲಿ ಜನಿಸುವ ತಮ್ಮ ಮಗುವಿಗೆ ಮಿರ್ಜಾ ಮಲಿಕ್ ಎಂದು ನಾಮಕರಣ ಮಾಡುವುದಾಗಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹೇಳಿದ್ದಾರೆ.

ಶನಿವಾರ ಇಲ್ಲಿ ‘ಗೋವಾ ಉತ್ಸವ 2018’ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದ್ದ ಲಿಂಗ ಸಮಾನತೆ ಕುರಿತ ಸಂವಾದದಲ್ಲಿ ಅವರು ಈ ವಿಷಯ ತಿಳಿಸಿದರು.

‘ಇವತ್ತು ನಿಮಗೊಂದು ಗುಟ್ಟು ಹೇಳುತ್ತೇನೆ. ನನ್ನ ಪತಿ ಶೋಯಬ್ ಮಲಿಕ್ (ಪಾಕ್ ಕ್ರಿಕೆಟಿಗ) ಅವರು ಹೆಣ್ಣುಮಗು ಬೇಕು ಎಂದು ಯಾವಾಗಲೂ ಹೇಳುತ್ತಾರೆ. ನನ್ನ ಮತ್ತು ಶೋಯಬ್ ಕುಟುಂಬದ ಹೆಸರುಗಳನ್ನು ಜೋಡಿಸಿ ಮಗುವಿಗೆ ನಾಮಕರಣ ಮಾಡುವ ಬಗ್ಗೆ ಚರ್ಚಿಸಿ ನಿರ್ಧರಿಸಿದ್ದೇವೆ. ಗಂಡು ಮಗು, ಹೆಣ್ಣುಮಗು ಯಾವುದೇ ಆಗಲಿ ಅದೇ ಹೆಸರು ಇಡುತ್ತೇವೆ ನಮ್ಮ ಮದುವೆಯ ನಂತರ ನನ್ನ ಸರ್‌ ನೇಮ್ ಬದಲಿಸಿಲ್ಲ. ಮುಂದೆಯೂ ಬದಲಿಸುವುದಿಲ್ಲ’ಎಂದರು.

‘ನಮ್ಮ ತಂದೆಗೆ ನಾವಿಬ್ಬರು ಹೆಣ್ಣುಮಕ್ಕಳು. ನಮಗೊಬ್ಬ ಸಹೋದರ ಸಹೋದರ ಇರಬೇಕು ಎಂಬ ಬಗ್ಗೆ ಯಾವತ್ತೂ ಆಸೆಪಟ್ಟಿಲ್ಲ. ಸಂಬಂಧಿಕರು ನಮ್ಮ ಅಪ್ಪ–ಅಮ್ಮನಿಗೆ ಗಂಡು ಮಕ್ಕಳಿರಬೇಕು ಎಂದು ಹೇಳಿದಾಗಲೆಲ್ಲ ಜಗಳ ಮಾಡಿದ ಉದಾಹರಣೆಗಳು ಇವೆ. ಗಂಡು–ಹೆಣ್ಣು ಎಂಬ ತಾರತಮ್ಯ ಸಲ್ಲದು’ ಎಂದರು.

‘ಕ್ರೀಡೆಯಲ್ಲಿ ಪುರುಷ ಮತ್ತು ಮಹಿಳಾ ಆಟಗಾರರ ಸಂಭಾವನೆ ನೀಡಿಕೆಯಲ್ಲಿ ತಾರತಮ್ಯ ಇದೆ. ಈ ಪದ್ಧತಿ ತೊಲಗಬೇಕು’ ಎಂದು 31 ವರ್ಷದ ಸಾನಿಯಾ ಹೇಳಿದರು.

ಪ್ರತಿಕ್ರಿಯಿಸಿ (+)