ಮುದ್ರಾ ಯೋಜನೆ ಹೆಸರಿನಲ್ಲಿ ಮೋಸ

7
ಯುವಕರಿಬ್ಬರು ಪೊಲೀಸ್‌ ವಶಕ್ಕೆ

ಮುದ್ರಾ ಯೋಜನೆ ಹೆಸರಿನಲ್ಲಿ ಮೋಸ

Published:
Updated:

ಬೆಂಗಳೂರು: ಕೇಂದ್ರ ಸರ್ಕಾರದ ‘ಮುದ್ರಾ’ ಯೋಜನೆ ಅಡಿ ಸಾಲ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ್ದ ಆರೋಪದಡಿ ಪುನೀತ್‌ (28) ಹಾಗೂ ಆತನ ಸ್ನೇಹಿತನನ್ನು ಮಲ್ಲೇಶ್ವರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

‘ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ’ದ ನಕಲಿ ಚಲನ್ ಮತ್ತು ಗುರುತಿನ ಕಾರ್ಡ್ ಇಟ್ಟುಕೊಂಡು ಆರೋಪಿಗಳು ವಂಚಿಸಿದ್ದಾರೆ’ ಎಂದು ವ್ಯಕ್ತಿಯೊಬ್ಬರು ದೂರು ನೀಡಿದ್ದರು.

‘ತಾವು ಬ್ಯಾಂಕ್‌ ಉದ್ಯೋಗಿಗಳು ಎಂದು ಪರಿಚಯಿಸಿಕೊಳ್ಳುತ್ತಿದ್ದ ಆರೋಪಿಗಳು, ₹4 ಲಕ್ಷದವರೆಗೆ ಸಾಲ ಕೊಡಿಸುವುದಾಗಿ ಜನರನ್ನು ನಂಬಿಸುತ್ತಿದ್ದರು. ಅವರು, 20ಕ್ಕೂ ಹೆಚ್ಚು ಮಂದಿಯಿಂದ ₹60 ಲಕ್ಷದಿಂದ ₹70 ಲಕ್ಷದಷ್ಟು ಹಣ ಪಡೆದಿರುವ ಮಾಹಿತಿ ಇದೆ. ಅದನ್ನು ಪರಿಶೀಲಿಸುತ್ತಿದ್ದೇವೆ. ಬಸವೇಶ್ವರ ನಗರ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry