ಮೆಟ್ರೊದಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ

7

ಮೆಟ್ರೊದಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ

Published:
Updated:

ಬೆಂಗಳೂರು: ಮೆಟ್ರೊದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬ ₹7 ಲಕ್ಷ ವಂಚನೆ ಮಾಡಿರುವ ಬಗ್ಗೆ ಸದಾಶಿವ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಸ್‌ ಚಾಲಕರಾಗಿರುವ ಎಲ್‌. ಗೋವಿಂದ ಅವರು ದೂರು ನೀಡಿದ್ದಾರೆ. ಬೆಂಗಳೂರು–ಹಾಸನ ಬಸ್‌ ಚಾಲಕನಾಗಿದ್ದ ಸಂದರ್ಭದಲ್ಲಿ ಪರಿಚಯವಾಗಿದ್ದ ಅಮ್‌ಜಾ ಎಂಬುವರು ತನಗೆ ಬೆಂಗಳೂರಿನಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳ ಸಂಪರ್ಕವಿದ್ದು ಮೆಟ್ರೊದಲ್ಲಿ ಕೆಲಸ ಕೊಡಿಸುವುದಾಗಿ ತಿಳಿಸಿ ನಗದು ರೂಪದಲ್ಲಿ ಮೊದಲು ₹ 5.50 ಲಕ್ಷ, ಬಳಿಕ ಖಾತೆಗೆ 1.50 ಲಕ್ಷ ಹಾಕಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ದೂರು ಸ್ವೀಕರಿಸಿರುವ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ತನಿಖೆ ನಡೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry