7

ಪುತ್ರಿಯನ್ನು ದೇವದಾಸಿ ಮಾಡಿದ ಆರೋಪ: ಪೋಷಕರ ಬಂಧನ

Published:
Updated:

ಕೊಪ್ಪಳ: ಮಗಳನ್ನು ದೇವದಾಸಿಯನ್ನಾಗಿ ಮಾಡಿದ್ದ ಪೋಷಕರನ್ನು ಕುಕನೂರು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಕುಕನೂರು ತಾಲ್ಲೂಕು ವೀರಾಪುರ ಗ್ರಾಮದ ಹುಲಿಗೆವ್ವ, ಇವರ ಪತಿ ಹನುಮಪ್ಪ ಬಂಧಿತರು. ಇವರು ತಮ್ಮ ಪುತ್ರಿಯನ್ನು ಜ.31ರಂದು ಬೆಳಗಾವಿ ಜಿಲ್ಲೆ ಸವದತ್ತಿಯ ಎಲ್ಲಮ್ಮ ದೇವಸ್ಥಾನದಲ್ಲಿ ದೇವದಾಸಿಯನ್ನಾಗಿಸುವ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದ್ದರು. ಇದಕ್ಕೆ ಹುಲಿಗೆವ್ವ ಅವರ ಸಹೋದರರಾದ ಯಲ್ಲಪ್ಪ, ವೀರಪ್ಪ ನೆರವಾಗಿದ್ದರು ಎಂದು ಆರೋಪಿಸಿ ದೇವದಾಸಿ ಪುನರ್ವಸತಿ ಯೋಜನೆಯ ಅನುಷ್ಠಾನಾಧಿಕಾರಿ ರೇಣುಕಾ ಎಂ.ಮಠದ ದೂರು ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry