5

ಹಫೀಜ್‌ ಸಯೀದ್‌ನ ಜೆಯುಡಿ ಸಂಘಟನೆ ಶಾಶ್ವತ ನಿಷೇಧಕ್ಕೆ ಪಾಕಿಸ್ತಾನ ಚಿಂತನೆ

Published:
Updated:
ಹಫೀಜ್‌ ಸಯೀದ್‌ನ ಜೆಯುಡಿ ಸಂಘಟನೆ ಶಾಶ್ವತ ನಿಷೇಧಕ್ಕೆ ಪಾಕಿಸ್ತಾನ ಚಿಂತನೆ

ಇಸ್ಲಾಮಾಬಾದ್: ಮುಂಬೈ ದಾಳಿಯ ಸಂಚುಕೋರ ಹಫೀಜ್‌ ಸಯೀದ್‌ನ ಜಮಾತ್–ಉದ್–ದವಾ (ಜೆಯುಡಿ) ಮತ್ತು ಇತರ ಉಗ್ರ ಸಂಘಟನೆಗಳ ಶಾಶ್ವತ ನಿಷೇಧಕ್ಕೆ ಮಸೂದೆ ರೂಪಿಸಲು ಪಾಕಿಸ್ತಾನ ಚಿಂತನೆ ನಡೆಸಿದೆ.

ಕೆಲವು ಉಗ್ರ ಸಂಘಟನೆಗಳನ್ನು ನಿಷೇಧಿಸಿ ಹೊರಡಿಸಲಾಗಿದ್ದ ಸುಗ್ರೀವಾಜ್ಞೆಗೆ ಪರ್ಯಾಯವಾಗಿ ಮಸೂದೆ ರೂಪಿಸಲು ಸರ್ಕಾರ ಉದ್ದೇಶಿಸಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

‘ಭಯೋತ್ಪಾದನಾ ನಿಗ್ರಹ ಕಾಯ್ದೆ(ಎಟಿಎ), 1997ಕ್ಕೆ’ ತಿದ್ದುಪಡಿ ತರುವ ಪ್ರಸ್ತಾವಿತ ಕರಡು ಮಸೂದೆ ನಾಳೆಯಿಂದ ಆರಂಭಗೊಳ್ಳಲಿರುವ ಸಂಸತ್ ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ ಎಂದು ಕಾನೂನು ಸಚಿವಾಲಯದ ಮೂಲಗಳು ತಿಳಿಸಿವೆ.

ಇನ್ನಷ್ಟು...

ಹಫೀಜ್ ನೇತೃತ್ವದ ಮಿಲ್ಲಿ ಮುಸ್ಲಿಂ ಲೀಗ್ ರಾಜಕೀಯ ಪಕ್ಷ ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ

ಕಾನೂನು ಪರಿಧಿ ಒಳಗೆ ಕಾರ್ಯನಿರ್ವಹಿಸಲು ಹಫೀಜ್ ಸಯೀದ್‌ ಸಂಘಟನೆಗಳಿಗೆ ಹೈಕೋರ್ಟ್ ಸೂಚನೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry