7

ಕಾಮನ್‌ವೆಲ್ತ್‌ ಕ್ರೀಡಾಕೂಟ: ಭಾರತಕ್ಕೆ ಮತ್ತೊಂದು ಕಂಚು

Published:
Updated:
ಕಾಮನ್‌ವೆಲ್ತ್‌ ಕ್ರೀಡಾಕೂಟ: ಭಾರತಕ್ಕೆ ಮತ್ತೊಂದು ಕಂಚು

ಗೋಲ್ಡ್‌ಕೋಸ್ಟ್‌: ಇಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತಕ್ಕೆ ಭಾನುವಾರ ಮತ್ತೊಂದು ಕಂಚು ಲಭಿಸಿದೆ.

ಪುರುಷರ 94 ಕೆ.ಜಿ. ವಿಭಾಗದ ವೇಟ್‌ ಲಿಫ್ಟಿಂಗ್‌ನಲ್ಲಿ ವಿಕಾಸ್‌ ಠಾಕೂರ್‌ ಕಂಚಿನ ಪದಕ ಗೆದ್ದಿದ್ದಾರೆ. ಒಟ್ಟು 351 ಕೆ.ಜಿ. ಭಾರ ಎತ್ತುವ ಮೂಲಕ ವಿಕಾಸ್‌ ಈ ಸಾಧನೆ ಮಾಡಿದ್ದಾರೆ.

369 ಕೆ.ಜಿ. ಭಾರ ಎತ್ತಿದ ಕೆನಡಾದ ಸ್ಪರ್ಧಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಭಾರತದ ವೇಟ್‌ ಲಿಫ್ಟರ್‌ಗಳು ಕೂಟದಲ್ಲಿ ಈವರಗೆ ಐದು ಚಿನ್ನದ ಪದಕ ಗಳಿಸಿದ್ದಾರೆ.

ವೇಟ್‌ ಲಿಫ್ಟಿಂಗ್‌ನಲ್ಲಿ ಭಾರ ಎತ್ತಿದ ವಿಕಾಸ್‌ ಠಾಕೂರ್‌ –ಪಿಟಿಐ ಚಿತ್ರ

ವಿಕಾಸ್‌ ಠಾಕೂರ್‌ ಕಂಚಿನ ಪದಕ ಗಳಿಸಿದ ಬಳಿಕ ಲೂದಿಯಾನದಲ್ಲಿ ಅವರ ಕುಟುಂಬದ ಸದಸ್ಯರು ವಿಕಾಸ್‌ ಅವರ ಸಾಧನೆಗೆ ಸಂತಸ ವ್ಯಕ್ತಪಡಿಸಿ ಸಂಭ್ರಮಿಸಿದರು. ಅವರು ಈ ಹಿಂದೆ ಗಳಿಸಿರುವ ಪದಕಗಳನ್ನು ತೋರಿಸಿ ಹರ್ಷ ವ್ಯಕ್ತಪಡಿಸಿದರು.

* ಇವನ್ನೂ ಓದಿ...

ಕಾಮನ್‌ವೆಲ್ತ್‌ ಕ್ರೀಡಾಕೂಟ: ಭಾರತಕ್ಕೆ ಮತ್ತೆರಡು ಚಿನ್ನ 

ನೋವು ಲೆಕ್ಕಿಸದೆ ಚಿನ್ನ ಗೆದ್ದ ಭಾರತದ ಸತೀಶ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry