ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸದ ಪ್ರಯಾಸ ಪಾರಾಗೋದು ಹೇಗೆ?

Last Updated 8 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಕೆಲವರಿಗೆ ಎಲ್ಲಾದರೂ ಪ್ರಯಾಣಕ್ಕೆ ಹೊರಟರೆ ಸಾಕು ವಾಂತಿ, ತಲೆಸುತ್ತು ಇದ್ದಕ್ಕಿದ್ದಂತೆ ಆರಂಭವಾಗಿಬಿಡುತ್ತದೆ. ಆ ಪ್ರವಾಸ ಚಿಕ್ಕದಿರಲಿ, ದೊಡ್ಡದಿರಲಿ ಈ ಗೋಳು ತಪ್ಪಿದ್ದಲ್ಲ. ಈ ಸಮಸ್ಯೆಯಿಂದಾಗಿ ಹೊರಗೆ ಸುತ್ತುವ ಬಯಕೆಯನ್ನು ಅದುಮಿಟ್ಟುಕೊಳ್ಳುವವರೇ ಹೆಚ್ಚು.

ಪ್ರಯಾಣದ ಸಂದರ್ಭದಲ್ಲಿ ಉಂಟಾಗುವ ಇಂಥ ಕಿರಿಕಿರಿಗಳಿಗೆ ‘ಟ್ರಾವೆಲ್ ಸಿಕ್‌ನೆಸ್’ ಅನ್ನುತ್ತಾರೆ.

ಕಣ್ಣಿನ ಮೂಲಕ ಗ್ರಹಿಸಿದ ದೃಶ್ಯಗಳನ್ನು ಮಿದುಳು ಸಂಸ್ಕರಿಸಿ ಕಿವಿಗೂ ರವಾನಿಸುತ್ತದೆ. ಈ ಸಂದೇಶಗಳಿಗೆ ದೇಹ ಸಕಾರಾತ್ಮಕವಾಗಿ ಸ್ಪಂದಿಸದಿದ್ದಾಗ ತಲೆನೋವು, ವಾಂತಿ, ತಲೆ ಸುತ್ತುವಿಕೆ ಕಾಣಿಸಿಕೊಳ್ಳುತ್ತದೆ.

ಟ್ರಾವೆಲ್ ಸಿಕ್‌ನೆಸ್‌ನಿಂದ ಪಾರಾಗಲು ಕೆಲ ಟಿಪ್ಸ್‌ಗಳು ಇಲ್ಲಿವೆ.

* ಬಸ್, ಕಾರಿನಲ್ಲಿ ಪ್ರಯಾಣಿಸುವ ಸಂದರ್ಭ ಬಂದಾಗ ಹಿಂದಿನ ಸೀಟಿನ ಬದಲು ಮುಂದಿನ ಸೀಟನ್ನೇ ಆಯ್ಕೆ ಮಾಡಿಕೊಳ್ಳಿ. ಇದರಿಂದ ತಾಜಾ ಗಾಳಿ, ಬೆಳಕು ದೇಹಕ್ಕೆ ಲಭಿಸುತ್ತದೆ.

* ಆದಷ್ಟು ಕಿಟಕಿ ಪಕ್ಕವೇ ಕುಳಿತುಕೊಳ್ಳಿ. ತಾಜಾ ಗಾಳಿಯು ವಾಂತಿಗೆ ಕಡಿವಾಣ ಹಾಕುತ್ತದೆ. ಮಿದುಳಿನ ಮೇಲೆಯೂ ಅಷ್ಟು ಒತ್ತಡ ಉಂಟಾಗದು.

* ಯಾವ ಕಾರಣಕ್ಕೂ ನಿದ್ದೆ ಮಾಡಬೇಡಿ. ಇದರಿಂದ ಪ್ರಯಾಣದ ಸುಸ್ತು ಹೆಚ್ಚುತ್ತದೆ.

* ದೀರ್ಘ ಪ್ರಯಾಣದ ಸಂದರ್ಭದಲ್ಲಿ ಹೆಚ್ಚು ಆಹಾರ ಸೇವಿಸಬೇಡಿ. ಹಸಿವಾದಾಗ ಮಾತ್ರ ತುಸು ಆಹಾರ ಸೇವಿಸಿ.

* ಪ್ರಯಾಣದ ಸಮಯದಲ್ಲಿ ಬಾಯಲ್ಲಿ ಚ್ಯೂಯಿಂಗ್ ಗಮ್, ಏಲಕ್ಕಿ, ಲವಂಗ ಅಗಿಯಿರಿ.

* ಮುಂಗೈಗೆ ಬ್ಯಾಂಡ್ ಕಟ್ಟಿಕೊಳ್ಳುವುದರಿಂದಲೂ ಟ್ರಾವೆಲ್ ಸಿಕ್‌ನೆಸ್‌ನಿಂದ ಸಮಸ್ಯೆಯಿಂದ ಪಾರಾಗಬಹುದು.

* ಶುಂಠಿ ಜಗಿಯುವುದು, ನಿಂಬೆಹುಳಿ ಪೆಪ್ಪರ್‌ಮಿಂಟ್‌ ಸವಿಯುವುದು, ನಿಂಬೆಹಣ್ಣಿನ ವಾಸನೆ ಆಘ್ರಾಣಿಸುವುದರಿಂದಲೂ ಟ್ರಾವೆಲ್ ಸಿಕ್‌ನೆಸ್‌ನ ಪರಿಣಾಮಗಳಿಗೆ ತಡೆಯೊಡ್ಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT