ಜಯಾ ಬಚ್ಚನ್

ಗುರುವಾರ , ಮಾರ್ಚ್ 21, 2019
30 °C

ಜಯಾ ಬಚ್ಚನ್

Published:
Updated:
ಜಯಾ ಬಚ್ಚನ್

ಸಹಜಭಾವದ ನಟಿ ಎಂದೇ ಖ್ಯಾತರಾಗಿರುವ ಜಯಾ ಬಚ್ಚನ್‌ (ಜನನ ಏ.9, 1948) ಬಾಲ್ಯದಲ್ಲೇ ಸಿನಿಮಾ ಸೆಳೆತಕ್ಕೆ ಒಳಗಾದವರು. ಸತ್ಯಜಿತ್ ರೇ ನಿರ್ದೇಶನದ ‘ಮಹಾನಗರ್‌’ ಬಂಗಾಳಿ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದರು.

ಹೃಷಿಕೇಶ್‌ ಮುಖರ್ಜಿ ನಿರ್ದೇಶನದ ‘ಗುಡ್ಡಿ’ ಸಿನಿಮಾ ಮೂಲಕ ನಾಯಕಿಯಾಗಿ ಹಿಂದಿ ಚಿತ್ರರಂಗದಲ್ಲಿ ನೆಲೆಯೂರಿದ

ಜಯಾ ಬಚ್ಚನ್, ‘ಉಪಹಾರ್’, ‘ಕೋಶಿಶ್‌’, ‘ಕೋರಾ ಕಾಗಜ್’, ‘ಅಭಿಮಾನ್’ನಂಥ ಚಿತ್ರಗಳಲ್ಲಿ ತಮ್ಮದೇ ಆದ ವಿಶಿಷ್ಟ ಅಭಿನಯದ ಛಾಪು

ಮೂಡಿಸಿದರು.

ಚಿತ್ರರಂಗದಲ್ಲಿ ಉತ್ತುಂಗದ ದಿನಗಳಲ್ಲಿ ಜಯಾ, ಉದ್ದನೆಯ ಕೂದಲು, ಸಹಜ ಸೌಂದರ್ಯ ಮತ್ತು ಸಹಜಾಭಿನಯದಿಂದ ಪ್ರೇಕ್ಷಕರ ಮನಸನ್ನು ಆವರಿಸಿದ್ದರು.

ನಟ ಅಮಿತಾಭ್ ಬಚ್ಚನ್ ಅವರನ್ನು ವಿವಾಹವಾಗಿ ಮಕ್ಕಳಾದ ಮೇಲೆ ಕೆಲಕಾಲ ಚಿತ್ರರಂಗದಿಂದ ದೂರವುಳಿದಿದ್ದ ಜಯಾ ಬಚ್ಚನ್, ‘ಹಜಾರ್ ಚೌರಾಸಿ ಕಿ ಮಾ’ ಸಿನಿಮಾದ ಮೂಲಕ ಮತ್ತೆ ಹಿಂದಿ ಚಿತ್ರರಂಗಕ್ಕೆ ಮರಳಿದರು.

ಒಂಬತ್ತು ಬಾರಿ ಫಿಲಂಫೇರ್ ಪ್ರಶಸ್ತಿಗಳನ್ನು ಗಳಿಸಿರುವ ಜಯಾ ಬಚ್ಚನ್, ರಾಜಕೀಯದಲ್ಲೂ ಯಶಸ್ಸು ಕಂಡಿದ್ದಾರೆ. ಸಮಾಜವಾದಿ ಪಕ್ಷದಿಂದ ರಾಜ್ಯಸಭಾ ಸದಸ್ಯೆಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry