ಯಲ್ಲಮ್ಮ ದೇವಿ ಕರಗ

7

ಯಲ್ಲಮ್ಮ ದೇವಿ ಕರಗ

Published:
Updated:
ಯಲ್ಲಮ್ಮ ದೇವಿ ಕರಗ

ಬೆಂಗಳೂರು: ಕೆಂಗೇರಿಯ ಯಲ್ಲಮ್ಮ ದೇವಿಯ 44ನೇ ವರ್ಷದ ಕರಗ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು.

ಶನಿವಾರ ಮಧ್ಯರಾತ್ರಿ 1ಗಂಟೆಗೆ ಹೂವಿನ ಕರಗ ಶಕ್ಯೋತ್ಸವ ಆರಂಭವಾಯಿತು. ಭಕ್ತರು ರಸ್ತೆಯಲ್ಲಿ ರಂಗೋಲಿ ಬಿಡಿಸಿ, ಉತ್ಸವವನ್ನು ಸ್ವಾಗತಿಸಿ

ದರು. ಅಂಚೆಕೇರಿ, ಲಿಂಗಾಯಿತರ ಬೀದಿ, ಬಾಪೂಜಿ ಕಾಲೋನಿ ಸೇರಿ ಕೆಂಗೇರಿಯ ಪ್ರಮುಖ ಬೀದಿಗಳಲ್ಲಿ ಸಾಗಿದ ಕರಗ, ಗ್ರಾಮದ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿತು.

ಪೂಜಾರಿ ವೈ.ಮುನಿಆಂಜನಪ್ಪ ಅವರು ಮೊದಲ ಬಾರಿಗೆ ಕರಗವನ್ನು ಹೊತ್ತರು. 24ಕ್ಕೂ ಹೆಚ್ಚು ಉತ್ಸವ ಮೂರ್ತಿಗಳ ಹೂವಿನ ಪಲ್ಲಕ್ಕಿ ಹಾಗೂ ಬೆಳ್ಳಿರಥಗಳ ಮೆರವಣಿಗೆ ಜನರ ಗಮನಸೆಳೆಯಿತು.ಕೀಲು ಕುದುರೆ, ಪಟದ ಕುಣಿತ, ವೀರಗಾಸೆ, ಪೂಜಾಕುಣಿತ, ಚಂಡೆ, ಡೊಳ್ಳು, ಜನರನ್ನು ರಂಚಿಸಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry