‘ದೊರೆಸ್ವಾಮಿ ಶತಮಾನೋತ್ಸವ ಸಂಭ್ರಮ’ ಇಂದು

7

‘ದೊರೆಸ್ವಾಮಿ ಶತಮಾನೋತ್ಸವ ಸಂಭ್ರಮ’ ಇಂದು

Published:
Updated:
‘ದೊರೆಸ್ವಾಮಿ ಶತಮಾನೋತ್ಸವ ಸಂಭ್ರಮ’ ಇಂದು

ಬೆಂಗಳೂರು: ಸ್ವಾತಂತ್ರ್ಯ ಸೇನಾನಿ ಎಚ್.ಎಸ್.ದೊರೆಸ್ವಾಮಿ ಶತಮಾನೋತ್ಸವ ಆಚರಣಾ ಸಮಿತಿಯು ನಗರದ ಸೆಂಟ್ರಲ್‌ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸೋಮವಾರ ಸಂಜೆ 4ಕ್ಕೆ ‘ದೊರೆಸ್ವಾಮಿ ಶತಮಾನೋತ್ಸವ ಸಂಭ್ರಮ’ವನ್ನು ಆಯೋಜಿಸಿದೆ.

ಸಾಹಿತಿ ದೇವನೂರ ಮಹಾದೇವ, ನಟ ಪ್ರಕಾಶ್ ರೈ, ಹಿರಿಯ ಪತ್ರಕರ್ತೆ ವಿಜಯಾ, ಹೋರಾಟಗಾರ ಸಿರಿಮನೆ ನಾಗರಾಜ್, ರವಿಕೃಷ್ಣಾರೆಡ್ಡಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ದೊರೆಸ್ವಾಮಿ ದಂಪತಿಗೆ ಗೌರವಾರ್ಪಣೆ ಸಲ್ಲಿಸಲಾಗುತ್ತದೆ. ಬಳಿಕ ದೊರೆಸ್ವಾಮಿ ಶತಮಾನದ ಸಂದೇಶ ನುಡಿಯಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry