ಗುರುವಾರ , ಡಿಸೆಂಬರ್ 12, 2019
20 °C
ಹೊಸ ವಿಕ್ರಮಕ್ಕೆ ನಾಸಾ ಸಿದ್ಧ

ಸೂರ್ಯನ ಅತಿ ಸಮೀಪಕ್ಕೆ ಮೊದಲ ನೌಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಸೂರ್ಯನ ಅತಿ ಸಮೀಪಕ್ಕೆ ಮೊದಲ ನೌಕೆ

ವಾಷಿಂಗ್ಟನ್: ಸೂರ್ಯನ ಹತ್ತಿರಕ್ಕೆ ಬಾಹ್ಯಾಕಾಶ ನೌಕೆ ಕಳುಹಿಸುವ ಪ್ರಯತ್ನ ಕೆಲವೇ ತಿಂಗಳಲ್ಲಿ ಫಲ ನೀಡಲಿದೆ. ಪಾರ್ಕರ್ ಸೋಲಾರ್ ಪ್ರೋಬ್ ನೌಕೆಯನ್ನು ಜುಲೈ 31ರಂದು ನಾಸಾ ಉಡಾವಣೆ ಮಾಡಲಿದೆ.

ನೌಕೆಯನ್ನು ಹೊತ್ತು ಹಾರಲಿರುವ ಡೆಲ್ಟಾ –IV ಉಡಾವಣಾ ವಾಹನಕ್ಕೆ ಜೋಡಣೆ ಮಾಡುವ ಸಲುವಾಗಿ ನೌಕೆಯನ್ನು ಫ್ಲಾರಿಡಾಕ್ಕೆ ತರಲಾಗಿದೆ. ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನೌಕೆಯನ್ನು ಉಡಾವಣೆ ಮಾಡಲಾಗುತ್ತದೆ. ಮನುಷ್ಯ ನಿರ್ಮಿತ ಯಾವ ಬಾಹ್ಯಾಕಾಶ ಸಾಧನವೂ ಇದುವರೆಗೆ ಹೋಗದಷ್ಟು, ಸೂರ್ಯನ ಹತ್ತಿರಕ್ಕೆ ಈ ನೌಕೆ ತಲುಪಲಿದೆ.

ಶಾಖದಿಂದ ರಕ್ಷಣೆ ಪಡೆಯುವ ವ್ಯವಸ್ಥೆಯನ್ನು ನೌಕೆಯ ಮೇಲ್ಮೈಗೆ ಅಳವಡಿಸಲಾಗುವುದು. ಇದರಿಂದಾಗಿ ಸೂರ್ಯನ ಶಾಖವನ್ನು ತಡೆಯುವ ಸಾಮರ್ಥ್ಯವನ್ನು ನೌಕೆ ಪಡೆಯಲಿದೆ.

ಈ ನೌಕೆಯು ಸೌರ ಮಾರುತದ ಹಿಂದಿನ ಮೂಲ ತತ್ವದ ಬಗೆಗೆ ಅಧ್ಯಯನ ಮಾಡಿ ಮಾಹಿತಿ ರವಾನಿಸಲಿದೆ.

ಪ್ರತಿಕ್ರಿಯಿಸಿ (+)