ಐಪಿಎಲ್‌: ರಾಹುಲ್ ಅತಿವೇಗದ ಅರ್ಧಶತಕ

7

ಐಪಿಎಲ್‌: ರಾಹುಲ್ ಅತಿವೇಗದ ಅರ್ಧಶತಕ

Published:
Updated:
ಐಪಿಎಲ್‌: ರಾಹುಲ್ ಅತಿವೇಗದ ಅರ್ಧಶತಕ

ಮೊಹಾಲಿ: ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಕೆ.ಎಲ್. ರಾಹುಲ್ (51;16ಎಸೆತ, 6 ಬೌಂಡರಿ, 4ಸಿಕ್ಸರ್ ) ಭಾನುವಾರ  ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಅತಿ ವೇಗದ ಅರ್ಧಶತಕ ದಾಖಲಿಸಿದರು.

ಐ.ಎಸ್. ಬಿಂದ್ರಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕನ್ನಡಿಗ ರಾಹುಲ್ 14 ಎಸೆತಗಳಲ್ಲಿ 50ರ ಗಡಿ ಮುಟ್ಟಿದರು. ಹೋದ ವರ್ಷ ಸುನಿಲ್ ನಾರಾಯಣ್ 15 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು. 2014ರಲ್ಲಿ ಯೂಸುಫ್ ಪಠಾಣ್ ಕೂಡ 15 ಎಸೆತಗಳಲ್ಲಿ ದಾಖಲೆ ಮಾಡಿದ್ದರು. ರಾಹುಲ್ ಅವರಿಬ್ಬರನ್ನೂ ಮೀರಿ ನಿಂತರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry