ಜನರ ಸುರಕ್ಷೆಗಾಗಿ ಗಡಿ ನಿಯಂತ್ರಣ ರೇಖೆ ಬಳಿ 102 ಬಂಕರ್‌ ನಿರ್ಮಾಣ

7

ಜನರ ಸುರಕ್ಷೆಗಾಗಿ ಗಡಿ ನಿಯಂತ್ರಣ ರೇಖೆ ಬಳಿ 102 ಬಂಕರ್‌ ನಿರ್ಮಾಣ

Published:
Updated:

ಜಮ್ಮು: ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನ ನಡೆಸುವ ಷೆಲ್‌ ದಾಳಿಯಿಂದ ಗಡಿ ಗ್ರಾಮಗಳ ಜನರ ಸುರಕ್ಷೆಗಾಗಿ ನಿಯಂತ್ರಣ ರೇಖೆ ಬಳಿ 102 ಬಂಕರ್‌ಗಳನ್ನು ನಿರ್ಮಿಸಲಾಗಿದೆ.

‘ಪ್ರತಿ ಬಂಕರ್‌ನಲ್ಲಿ 10 ಮಂದಿ ಉಳಿದುಕೊಳ್ಳಬಹುದು. ತುರ್ತು ಸಂದರ್ಭದಲ್ಲಿ ಈ ಎಲ್ಲಾ ಬಂಕರ್‌ಗಳಲ್ಲಿ ಒಟ್ಟು 1,200 ಜನರು ಆಶ್ರಯ ಪಡೆಯಬಹುದು’ ಎಂದು ರಾಜೌರಿಯ ಜಿಲ್ಲಾ ಅಭಿವೃದ್ಧಿ ಆಯುಕ್ತ ಶಾಹೀದ್‌ ಇಕ್ಬಾಲ್‌ ಚೌಧರಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 102 ಕಿ.ಮೀ ಮಾರ್ಗದ ಗಡಿ ನಿಯಂತ್ರಣ ರೇಖೆ ಸಮೀಪ 72 ಗ್ರಾಮಗಳಿವೆ. ಅವುಗಳಲ್ಲಿ 22 ಗ್ರಾಮಗಳು ಪಾಕಿಸ್ತಾನದ ಷೆಲ್‌ ದಾಳಿಗೆ ಸುಲಭ ಗುರಿಯಾಗುತ್ತಿವೆ.

‘ಬಂಕರ್‌ ನಿರ್ಮಾಣ ಕಳೆದ ವರ್ಷ ಆರಂಭಿಸಲಾಗಿತ್ತು. ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಹಾಗೂ ಸಮುದಾಯದ ಸಹಭಾಗಿತ್ವದಲ್ಲಿ ಈ ಯೋಜನೆ ಪೂರ್ಣಗೊಳಿಸಲಾಗಿದೆ. ಪ್ರತಿ ಬಂಕರ್‌ಗೆ ₹2.40 ಲಕ್ಷ ವೆಚ್ಚ ತಗುಲಿದೆ. ಕೇಂದ್ರವು 14,460 ಬಂಕರ್‌ಗಳ ನಿರ್ಮಾಣಕ್ಕೆ ₹415.73 ಕೋಟಿ ವೆಚ್ಚದ ಯೋಜನೆಗೆ ಹಸಿರು ನಿಶಾನೆ ನೀಡಿದೆ’ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry