ಆಳ್ವಾಸ್ ತಂಡಕ್ಕೆ ಪ್ರಶಸ್ತಿ

ಗುರುವಾರ , ಮಾರ್ಚ್ 21, 2019
32 °C

ಆಳ್ವಾಸ್ ತಂಡಕ್ಕೆ ಪ್ರಶಸ್ತಿ

Published:
Updated:
ಆಳ್ವಾಸ್ ತಂಡಕ್ಕೆ ಪ್ರಶಸ್ತಿ

ಬಳ್ಳಾರಿ: ಸೂಪರ್‌ ಲೀಗ್‌ ಮಾದರಿಯಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ಗೆಲುವು ಪಡೆದ ಮೂಡಬಿದಿರೆಯ ಆಳ್ವಾಸ್ ಮಹಿಳಾ ತಂಡದವರು ಅಖಿಲ ಭಾರತ ಆಹ್ವಾನಿತ ಬಾಲ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಭಾನುವಾರ ಸೂಪರ್‌ ಲೀಗ್‌ ಪಂದ್ಯಗಳು ನಡೆದವು. ಚೆನ್ನೈನ ಎಸ್‌.ಆರ್‌.ಎಂ. ವಿಶ್ವವಿದ್ಯಾಲಯ ಎರಡನೇ ಸ್ಥಾನ ಪಡೆಯಿತು. ಆಳ್ವಾಸ್‌ ತಂಡಕ್ಕೆ ₹ 15 ಸಾವಿರ, ರನ್ನರ್ಸ್‌ ಅಪ್‌ ತಂಡಕ್ಕೆ ₹ 10 ಸಾವಿರ ಬಹುಮಾನ ಲಭಿಸಿತು. ಬಳ್ಳಾರಿಯ ಶ್ರವಣ ಇನ್‌ಸ್ಟಿಟ್ಯೂಟ್‌ ಮೂರನೇ ಸ್ಥಾನ ಗಳಿಸಿತು.

ಪುರುಷರ ವಿಭಾಗದಲ್ಲಿ ಭುವನೇಶ್ವರದ ಈಸ್ಟ್‌ಕೋಸ್ಟ್‌ ರೈಲ್ವೆ, ಮುಂಬೈನ ಪಶ್ಚಿಮ ರೈಲ್ವೆ  ಮತ್ತು ಚೆನ್ನೈನ ದಕ್ಷಿಣ ರೈಲ್ವೆ ತಂಡಗಳು ತಲಾ ಮೂರು ಪಂದ್ಯಗಳಲ್ಲಿ ಗೆಲುವು ಪಡೆದು ಸಮ ಪಾಯಿಂಟ್ಸ್‌ ಹೊಂದಿದ್ದವು.

ಆದರೆ ತಂಡಗಳ ಗೆಲುವಿನ ಪಾಯಿಂಟ್ಸ್‌ ಅಂತರದ ಆಧಾರದ ಮೇಲೆ ಈಸ್ಟ್‌ಕೋಸ್ಟ್‌ ತಂಡ ಚಾಂಪಿಯನ್ ಆಗಿ ₹ 50 ಸಾವಿರ ಬಹುಮಾನ ಪಡೆದುಕೊಂಡಿತು. ರನ್ನರ್ಸ್‌ ಅಪ್‌ ಆದ ಪಶ್ಚಿಮ ರೈಲ್ವೆ ತಂಡಕ್ಕೆ ₹ 30 ಸಾವಿರ ಲಭಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry