ಭಾನುವಾರ, ಡಿಸೆಂಬರ್ 15, 2019
25 °C
ಆರ್ಟಿಸ್ಟಿಕ್‌ ಜಿಮ್ನಾಸ್ಟಿಕ್ಸ್‌: ಭಾರತದ ಪ್ರಣತಿಗೆ ಎಂಟನೆ ಸ್ಥಾನ

ವಾಲ್ಟ್‌ನಲ್ಲಿ ಚಿನ್ನ ಗೆದ್ದ ಒಲಸೆನ್‌

ಪಿಟಿಐ Updated:

ಅಕ್ಷರ ಗಾತ್ರ : | |

ವಾಲ್ಟ್‌ನಲ್ಲಿ ಚಿನ್ನ ಗೆದ್ದ ಒಲಸೆನ್‌

ಗೋಲ್ಡ್‌ ಕೋಸ್ಟ್‌: ಕಾಮನ್‌ವೆಲ್ತ್‌ ಕ್ರೀಡಾಕೂಟದ ಆರ್ಟಿಸ್ಟಿಕ್‌ ಜಿಮ್ನಾ ಸ್ಟಿಕ್ಸ್‌ನ ವಾಲ್ಟ್‌ ವಿಭಾಗದಲ್ಲಿ ಪದಕ ಜಯಿಸುವ ಕನಸು ಕಂಡಿದ್ದ ಭಾರತದ ಪ್ರಣತಿ ನಾಯಕ್‌ಗೆ ನಿರಾಸೆ ಕಾಡಿತು.

ಅರ್ಹತಾ ಸುತ್ತಿನಲ್ಲಿ ಅಮೋಘ ಸಾಮರ್ಥ್ಯ ತೋರಿದ್ದ ಪ್ರಣತಿ, ಭಾನುವಾರ ನಡೆದ ಫೈನಲ್‌ನಲ್ಲಿ ಎಂಟನೆ ಸ್ಥಾನ ಗಳಿಸಿದರು. ಅವರು 11.983 ಪಾಯಿಂಟ್ಸ್‌ ಕಲೆ ಹಾಕಲಷ್ಟೇ ಶಕ್ತರಾದರು.

ಕೆನಡಾದ ಶಲೊನ್‌ ಒಲಸೆನ್‌ ಈ ವಿಭಾಗದ ಚಿನ್ನಕ್ಕೆ ಕೊರಳೊಡ್ಡಿದರು. ಅವರು ಒಟ್ಟು 14.566 ಪಾಯಿಂಟ್ಸ್‌ ಗಳಿಸಿ ಈ ಸಾಧನೆ ಮಾಡಿದರು.

ಕೆನಡಾದ ಎಲಿಜಬೆತ್‌ ಬ್ಲ್ಯಾಕ್‌ (14:233 ಪಾ.) ಮತ್ತು ಆಸ್ಟ್ರೇಲಿಯಾದ ಎಮಿಲಿ ವೈಟ್‌ (13.849 ಪಾ.) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.

ಮಹಿಳೆಯರ ಯುನಿವರ್ಸಲ್‌ ಬಾರ್ಸ್‌ ಫೈನಲ್‌ನಲ್ಲಿ ಇಂಗ್ಲೆಂಡ್‌ನ ಜಾರ್ಜಿಯಾ ಮೆ ಫೆಂಟನ್‌, ಚಿನ್ನ ಗೆದ್ದರು. ಅವರು 14.600 ಪಾಯಿಂಟ್ಸ್‌ ಸಂಗ್ರಹಿಸಿದರು.

ಕೆನಡಾದ ಬ್ರೆಟ್ನಿ ರೋಜರ್ಸ್‌ (14.200‍ ಪಾ.) ಬೆಳ್ಳಿ ಜಯಿಸಿದರೆ, ಆಸ್ಟ್ರೇಲಿಯಾದ ಜಾರ್ಜಿಯಾ ಗಾಡ್ವಿನ್‌ (13.433 ಪಾ.) ಕಂಚಿಗೆ ತೃಪ್ತಿಪಟ್ಟರು.

ಪುರುಷರ ಫ್ಲೋರ್‌ ಎಕ್ಸಸೈಸ್‌ ವಿಭಾಗದ ಚಿನ್ನ ಸೈಪ್ರಸ್‌ನ ಮಾರಿಯಸ್‌ ಜಾರ್ಜಿಯು ಅವರ ಪಾಲಾಯಿತು. ಮಾರಿಯಸ್‌ 13.966 ಪಾಯಿಂಟ್ಸ್‌ ಕಲೆಹಾಕಿದರು.

ಕೆನಡಾದ ಸ್ಕಾಟ್‌ ಮಾರ್ಗನ್‌ (13.833 ಪಾ.) ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಸ್ಕಾಟ್ಲೆಂಡ್‌ನ ಡೇನಿಯಲ್‌ ಪುರ್ವಿಸ್‌ (13.733 ಪಾ.) ಕಂಚಿಗೆ ಕೊರಳೊಡ್ಡಿದರು.

ಪೊಮ್ಮೆಲ್‌ ಹಾರ್ಸ್‌ ವಿಭಾಗದಲ್ಲಿ ನಾರ್ಥರ್ನ್‌ ಐರ್ಲೆಂಡ್‌ನ ರಿಯಸ್‌ ಮೆಕ್‌ಲೆನಗಾನ್‌ (15.100 ಪಾಯಿಂಟ್ಸ್‌) ಚಿನ್ನ ಗೆದ್ದರು.

ಇಂಗ್ಲೆಂಡ್‌ನ ಮ್ಯಾಕ್ಸ್‌ ವಿಟ್‌ಲಾಕ್‌ (15.100 ಪಾ.) ಮತ್ತು ಕೆನಡಾದ ಜಾಚರಿ ಕ್ಲೆ (14.300 ಪಾ.) ಕ್ರಮವಾಗಿ ಬೆಳ್ಳಿ ಮತ್ತು ಕಂಚು ಜಯಿಸಿದರು.

ರಿಂಗ್ಸ್‌ ವಿಭಾಗದಲ್ಲಿ ಇಂಗ್ಲೆಂಡ್‌ನ ಕರ್ಟ್ನಿ ಟಲೊಚ್‌ ಚಿನ್ನಕ್ಕೆ ಮುತ್ತಿಕ್ಕಿದರು. ಅವರು 14.833 ಪಾಯಿಂಟ್ಸ್‌ ಸಂಗ್ರಹಿಸಿದರು.

ಪ್ರತಿಕ್ರಿಯಿಸಿ (+)