ಶುಕ್ರವಾರ, ಡಿಸೆಂಬರ್ 6, 2019
25 °C

ಮಂಗಳೂರು: ಮೂವರು ಯುವಕರ ಮೇಲೆ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಮೂವರು ಯುವಕರ ಮೇಲೆ ಹಲ್ಲೆ

ಮಂಗಳೂರು:  ಮೂವರು ಯುವಕರ ಮೇಲೆ ಆರು ಮಂದಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ ಘಟನೆ ಇಲ್ಲಿನ ತಣ್ಣೀರುಬಾವಿ ಕಡಲ ತೀರದಲ್ಲಿರುವ‌ ಕಸಬಾ ಬೆಂಗರೆಯ ಫುಟ್ಬಾಲ್ ಮೈದಾನದಲ್ಲಿ ಭಾನುವಾರ ರಾತ್ರಿ ನಡೆದಿದೆ.

ಕಸಬಾ ಬೆಂಗರೆ‌ ನಿವಾಸಿಗಳಾದ ಅನ್ ವೀಝ್, ಸಿರಾಝ್ ಮತ್ತು ಇಝಾದ್ ಹಲ್ಲೆಗೊಳಗಾದವರು.

ಮೂವರೂ ರಾತ್ರಿ 11.30ರ ಸುಮಾರಿಗೆ ಫುಟ್ಬಾಲ್ ಮೈದಾನದಲ್ಲಿ ಕುಳಿತಿದ್ದರು. ಅಲ್ಲಿಗೆ ಬಂದ ಆರು ಜನರ ಗುಂಪು ಇವರ ಮೇಲೆ‌ ತಲವಾರು ಮಾದರಿಯ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವೇಳೆ ಸಿರಾಝ ಮತ್ತು ಇಝಾದ್ ತಪ್ಪಿಸಿಕೊಂಡು ಓಡಿ ಹೋಗಿದ್ದರು. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡು ಮೈದಾನದಲ್ಲಿ ಕುಸಿದು ಬಿದ್ದಿದ್ದ ಅನ್ ವೀಝ್ ಎಂಬುವನನ್ನು ಸ್ಥಳೀಯ ಮೀನುಗಾರರು ಮತ್ತು ಯುವಕರು ಆಸ್ಪತ್ರೆಗೆ ಸಾಗಿಸಿದ್ದರು.

ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)