ಕೂಡ್ಲಿಗಿ: ಕರಡಿಯ ಜೀವಂತ ದಹನ

7

ಕೂಡ್ಲಿಗಿ: ಕರಡಿಯ ಜೀವಂತ ದಹನ

Published:
Updated:
ಕೂಡ್ಲಿಗಿ: ಕರಡಿಯ ಜೀವಂತ ದಹನ

ಕೂಡ್ಲಿಗಿ (ಬಳ್ಳಾರಿ ಜಿಲ್ಲೆ) : ಆಹಾರ ಹುಡುಕಿ ಬಂದು ಬಾವಿಯಲ್ಲಿ ಬಿದ್ದಿದ್ದ ಕರಡಿಯನ್ನು ಕಿಡಿಗೇಡಿಗಳು ಭಾನುವಾರ ಸಂಜೆ ಜೀವಂತವಾಗಿ ದಹಿಸಿದ್ದಾರೆ.

ತಾಲ್ಲೂಕಿನ ಜರಿಮಲೆ ಅರಣ್ಯದಿಂದ ಅಂದಾಜು ಮೂರು ವರ್ಷದ ಈ ಕರಡಿ, ಸಮೀಪದ ವೀಳ್ಯದೆಲೆಯ ತೋಟವೊಂದಕ್ಕೆ ಬಂದಿದೆ. ಇದನ್ನು ಕಂಡ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಯು ಗ್ರಾಮಸ್ಥರ ಸಹಾಯದಿಂದ ಕರಡಿಯನ್ನು ಕಾಡಿಗೆ ಓಡಿಸಿದ್ದಾರೆ. ಆ ವೇಳೆ ಕರಡಿಯು ಕಡೇಕೊಳ್ಳದ ಹೊಲವೊಂದರ ಪಾಳುಬಾವಿಯಲ್ಲಿ ಬಿದ್ದಿದೆ. ಇದನ್ನು ನೋಡಿದ ಕೆಲ ಕಿಡಿಗೇಡಿಗಳು ಬಾವಿಯಲ್ಲಿ ಬೆಳೆದಿದ್ದ ಒಣ ಹುಲ್ಲಿಗೆ ಬೆಂಕಿ ಹಚ್ಚಿದ್ದಾರೆ. ಆಗ ಕರಡಿ ಬಾವಿಯಲ್ಲೇ ಸಜೀವ ದಹನವಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಗುಡೇಕೋಟೆ ವಲಯ ಉಪ ಅರಣ್ಯಾಧಿಕಾರಿಗಳಾದ ಪಿ.ಮಹೇಶ್‌, ಎಚ್‌.ವೆಂಕಟೇಶನಾಯ್ಕ, ಕೂಡ್ಲಿಗಿ ಅಗ್ನಿ ಶಾಮಕ ದಳ ಸಿಬ್ಬಂದಿ ಕರಡಿ ಮೃತದೇಹವನ್ನು ಬಾವಿಯಿಂದ ಮೇಲೆತ್ತಿದರು. ಮರಣೋತ್ತರ ಪರೀಕ್ಷೆ ಬಳಿಕ ಕರಡಿ ಮೃತದೇಹವನ್ನು ಸುಡ

ಲಾಯಿತು. ಕಿಡಿಗೇಡಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಮಂಜುನಾಥ್‌ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry