ಶುಕ್ರವಾರ, ಡಿಸೆಂಬರ್ 13, 2019
19 °C

ನಾಡಿಗೆ ಬಂದಿದ್ದ ಕಾಡುಕೋಣ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಡಿಗೆ ಬಂದಿದ್ದ ಕಾಡುಕೋಣ ಸಾವು

ದಾವಣಗೆರೆ: ಆಹಾರ, ನೀರು ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ ಕಾಡು ಕೋಣವೊಂದು ಚನ್ನಗಿರಿ ತಾಲ್ಲೂಕಿನ ಕೆಂಪಯ್ಯನ ಕೊಪ್ಪಲು ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಸಾವನ್ನಪ್ಪಿದೆ.

ಶನಿವಾರ ಮನ್ನಾಜಂಗಲ್‌ ಅರಣ್ಯ ಪ್ರದೇಶ ಸಮೀಪ ಕಾಡುಕೋಣ ಕಾಣಿಸಿಕೊಂಡ ಬಗ್ಗೆ ಸುತ್ತಮುತ್ತಲಿನ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸಮೀಪದ ಅಡಿಕೆ ತೋಟ ಹೊಕ್ಕಿದ್ದ ಕಾಡುಕೋಣವನ್ನು ಸೆರೆಹಿಡಿಯಲು ಸಿಬ್ಬಂದಿ ಮುಂದಾಗಿದ್ದರು. ಸೆರೆ ಹಿಡಿಯುವಷ್ಟರಲ್ಲಿ ಅದು ಮೃತಪಟ್ಟಿದೆ ಎಂದು ಚನ್ನಗಿರಿ ವಲಯದ ಅರಣ್ಯಾಧಿಕಾರಿ ಮಾಹಿತಿ ನೀಡಿದರು.

ಕಾಯಿಲೆಯಿಂದ ಮೃತಪಟ್ಟಿರಬಹುದು. ಪ್ರಾಣಿಗಳು ದಾಳಿ ನಡೆಸಿರುವ ಗುರುತುಗಳು ಪತ್ತೆಯಾಗಿಲ್ಲ. ಗ್ರಾಮಸ್ಥರ ಮೇಲೂ ಕೋಣ ದಾಳಿ ನಡೆಸಿಲ್ಲ. ಕಾಡಿನಲ್ಲಿ ಮೇವು ಹಾಗೂ ನೀರಿನ ಕೊರತೆ ಉಂಟಾಗಿ ಸಾವನ್ನಪ್ಪಿರಬಹುದು ಎಂದರು

ಪ್ರತಿಕ್ರಿಯಿಸಿ (+)