‘ಮದ್ಯ ಮಾರಾಟಗಾರನಿಗೆ ಬಿಜೆಪಿ ಟಿಕೆಟ್’ : ಬಿಜೆಪಿ ಮುಖಂಡನಿಂದಲೇ ಅಸಮಾಧಾನ

7

‘ಮದ್ಯ ಮಾರಾಟಗಾರನಿಗೆ ಬಿಜೆಪಿ ಟಿಕೆಟ್’ : ಬಿಜೆಪಿ ಮುಖಂಡನಿಂದಲೇ ಅಸಮಾಧಾನ

Published:
Updated:
‘ಮದ್ಯ ಮಾರಾಟಗಾರನಿಗೆ ಬಿಜೆಪಿ ಟಿಕೆಟ್’ : ಬಿಜೆಪಿ ಮುಖಂಡನಿಂದಲೇ ಅಸಮಾಧಾನ

ಕಲಬುರ್ಗಿ: ‘ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮದ್ಯ ಮಾರಾಟಗಾರನಿಗೆ ಟಿಕೆಟ್ ಘೋಷಣೆ ಮಾಡುವ ಮೂಲಕ ಬಿಜೆಪಿ ನೈತಿಕತೆ ಮರೆತಿದೆ’ ಎಂದು ಬಿಜೆಪಿ ಮುಖಂಡ ಚಂದ್ರಶೇಖರ ಹಿರೇಮಠ ಆಕ್ರೋಶ ವ್ಯಕ್ತಪಡಿಸಿದರು.

‘ಮದ್ಯ ಮುಕ್ತ ಆಳಂದಕ್ಕಾಗಿ ನಾನು ಸಾಕಷ್ಟು ಹೋರಾಟ ಮಾಡಿದ್ದೇನೆ. ಅಬಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದ್ದೇನೆ. ಬಿಜೆಪಿ ನಾಯಕರು ನನಗೆ ಟಿಕೆಟ್ ಕೊಡುವ ಭರವಸೆ ನೀಡಿದ್ದರು. ಆದರೆ ಈಗ ಮದ್ಯ ಮಾರಾಟಗಾರ ಸುಭಾಷ ಗುತ್ತೇದಾರ ಅವರಿಗೆ ಟಿಕೆಟ್ ನೀಡಿದ್ದಾರೆ’ ಎಂದು ಅಸಮಾಧಾನ ಹೊರಹಾಕಿದರು.

‘ಯಾವುದೇ ಕಾರಣಕ್ಕೂ ಮದ್ಯ ಮಾರಾಟಗಾರನಿಗೆ ಬೆಂಬಲ ನೀಡಲು ಸಾಧ್ಯವಿಲ್ಲ. ಆದ್ದರಿಂದ ಟಿಕೆಟ್ ಬಗ್ಗೆ ಮರು ಪರಾಮರ್ಶೆ ಮಾಡಬೇಕು’ ಎಂದು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry